ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ #Kempegowda International Airport ರನ್ ವೇನಲ್ಲಿ ಬೀದಿ ನಾಯಿಗಳು #Stray dog on the runway ಓಡಾಡಿದ್ದು, ಭದ್ರತಾ ಲೋಪವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಎರಡು ಬೀದಿ ನಾಯಿಗಳು ಟರ್ಮಿನಲ್ 2ರ ಹೊಸ ರನ್’ವೇಯಲ್ಲಿ ಓಡಾಡಿವೆ. ಅಷ್ಟೇ ಅಲ್ಲದೇ ವಿಮಾನಗಳ ಬಳಿಯೂ ಹೋಗಿ ಸುತ್ತಾಡಿವೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅದೃಷ್ಟವಶಾತ್ ರನ್ ವೇಯಲ್ಲಿ ವಿಮಾನಗಳಿರದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಬೀದಿ ನಾಯಿಗಳನ್ನು ಕಂಡು ಕೂಡಲೇ ಅಲರ್ಟ್ ಆದ ವಿಮಾನ ನಿಲ್ದಾಣದ ಸಿಬ್ಬಂದಿ ಹರಸಾಹಸ ಪಟ್ಟು ಸೆರೆ ಹಿಡಿದಿದ್ದಾರೆ.
ಈ ಘಟನೆಯಿಂದ ಏರ್’ಪೋರ್ಟ್’ನಲ್ಲಿ ಭದ್ರತಾ ಲೋಪವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















