ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರತಿಷ್ಠಿತ ಶ್ರೀ ಗಜಾನನ ಸಿಲ್ಕ್ಸ್ ಆಯೋಜಿಸಿರುವ ಕೈಮಗ್ಗದ ರೇಷ್ಮೆ ಸೀರೆಗಳ ನಾಲ್ಕು ದಿನಗಳ ಪ್ರದರ್ಶನವನ್ನು ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಅವರು ಉದ್ಘಾಟಿಸಿದರು.
ಕಬ್ಬನ್ ಪಾರ್ಕ್‌ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಕೈಮಗ್ಗದ ರೇಷ್ಮೆ ಸೀರೆಗಳ ಪ್ರದರ್ಶನ ನಡೆಯುತ್ತಿದೆ. ಬೆಳಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೂ ಪ್ರದರ್ಶನ ನಡೆಯಲಿದ್ದು, ಇದು ಉಚಿತವಾಗಿರುತ್ತದೆ.

ಪ್ರಮುಖ ಕಾರ್ಯಕ್ರಮಗಳು ಮತ್ತು ಹಬ್ಬಗಳನ್ನು ಸಂಭ್ರಮಿಸುವಾಗ ಭಾರತದ ಎಲ್ಲ ಕಡೆಗಳಲ್ಲೂ ಮಹಿಳೆಯರು ವಸ್ತ್ರಗಳ ರಾಣಿ ಶುದ್ಧ ರೇಷ್ಮೆ ಸೀರೆಯನ್ನು ಧರಿಸಲು ಬಯಸುತ್ತಾರೆ. ಗ್ರಾಹಕರು ರೇಷ್ಮೆ ಸೀರೆ ಕೊಳ್ಳುವಾಗ ಅದು ಶೇ.100ರಷ್ಟು ಶುದ್ಧವಾಗಿರಬೇಕೆಂದು ಬಯಸುತ್ತಾರೆ. ಆದಾಗ್ಯೂ ಹಲವು ವ್ಯಾಪಾರಿಗಳು ವಿಸ್ಕೋಸ್ ರೇಯಾನ್, ಪಾಲಿಸ್ಟರ್, ನೈಲಾನ್ ಇತ್ಯಾದಿಯಲ್ಲಿ ತಯಾರಿಸಲಾದ ಅಗ್ಗದ ಆಯ್ಕೆಗಳ ಮೂಲಕ ಅಶುದ್ಧ ರೇಷ್ಮೆಯನ್ನು ಮಾರಾಟ ಮಾಡುತ್ತಾರೆ. ಇದು ಕುಟುಂಬಗಳಲ್ಲಿ ವಿವಾಹಗಳು, ವಿಶೇಷ ಕಾರ್ಯಕ್ರಮಗಳು ಮತ್ತು ಹಬ್ಬಗಳಿಗೆ ಶುದ್ಧ ರೇಷ್ಮೆ ಕೊಳ್ಳಲು ಮಹತ್ತರ ಅವಕಾಶವಾಗಿದೆ ಎಂದು ತಿಳಿಸಿದ್ದಾರೆ.

ಶ್ರೀ ಗಜಾನನ ಸಿಲ್ಕ್ಸ್ ಶುದ್ಧ ರೇಷ್ಮೆ ನೇಕಾರರು, ಸಹಕಾರ ಸಂಸ್ಥೆಗಳು, ಮಹಿಳಾ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ.
ಈ ಸಂದರ್ಭದಲ್ಲಿ ಶ್ರೀ ಗಜಾನನ ಸಿಲ್ಕ್ಸ್ ನಿರ್ದೇಶಕ ಬಿ.ಆರ್. ಜ್ಞಾನಮೂರ್ತಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post