ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಚಿಕ್ಕಮಗಳೂರು |
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಬಸ್ ಡಿಪೋ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್’ನಲ್ಲಿ #State Budget ಘೋಷಣೆ ಮಾಡಿರುವ ಅವರು, ಹಲವು ವರ್ಷಗಳ ಬೇಡಿಕೆಯಂತೆ ತರೀಕೆರೆಯಲ್ಲಿ ಬಸ್ ಡಿಪೋ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಜೆಟ್’ನಲ್ಲಿ ಸಾರಿಗೆ ಇಲಾಖೆಗೆ ಸಿಕ್ಕಿದ್ದೇನು?
ಶಕ್ತಿ ಯೋಜನೆಗೆ 5,300 ಕೋಟಿ ರೂ.
ಸಾರಿಗೆ ಸಿಬ್ಬಂದಿ ವೇತನ ಬಾಕಿ ಪಾವತಿಗೆ 1,271 ಕೋಟಿ ರೂ.
1 ಸಾವಿರ ಡೀಸೆಲ್ ಬಸ್ ಖರೀದಿ
ಕರ್ನಾಟಕ ಎಲೆಕ್ಟ್ರಿಕ್ ಬಸ್ ಯೋಜನೆಗೆ 2,000 ಕೋಟಿ ರೂ.
4 ಸಾವಿರ ವಿದ್ಯುತ್ ಚಾಲಿತ ಬಸ್
ಬಿಎಂಟಿಸಿಯ 32, ಸಾರಿಗೆ ನಿಗಮಗಳ 62 ಡಿಪೋ ಅಭಿವೃದ್ಧಿ
ಅಪಘಾತ ಸ್ಥಳ ಗುರುತಿಸಲು ಸಾಫ್ಟ್’ವೇರ್ ಮತ್ತು ಡ್ಯಾಶ್ ಬೋರ್ಡ್ – 5 ಕೋಟಿ ರೂ.
ರಾಜ್ಯಸ 25 ಆರ್’ಟಿಒ ಕಚೇರಿಗಳಲ್ಲಿ ರೂಫ್ ಟಾಪ್ ಸೋಲಾರ್ ಅಳವಡಿಕೆಗೆ 10 ಕೋಟಿ ರೂ.
ತುಮಕೂರಿನಲ್ಲಿ ಸೀಜಿಂಗ್ ಯಾರ್ಡ್ ನಿರ್ಮಾಣಕ್ಕೆ 5 ಕೋಟಿ ರೂ.
ಚಿಕ್ಕಮಗಳೂರು, ತುಮಕೂರಿನಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥ ನಿರ್ಮಾಣಕ್ಕೆ 12 ಕೋಟಿ ರೂ.
ರಾಮದುರ್ಗ, ಹೊನ್ನಾಳಿ, ಗದಗದಲ್ಲಿ ನೂತನ ಬಸ್ ನಿಲ್ದಾಣ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















