ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜೀ ಕನ್ನಡ ವಾಹಿನಿಯ Zee Kannada ಡಾನ್ಸ್ ಕರ್ನಾಟಕ ಡಾನ್ಸ್ Dance Karnataka Dance ಅಂತಿಮ ಘಟ್ಟ ತಲುಪಿದ್ದು ಫಿನಾಲೆ ಇದೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರ ಆಗಲಿದೆ.
ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ಡ್ಯಾನ್ಸರ್ ಗಳು ಜೋಡಿಯಾಗಿ ಪರ್ಫಾರ್ಮೆನ್ಸ್ ನೀಡಿದ ಈ ಶೋನಲ್ಲಿ ವಿವಿಧ ಬಗೆಯ ನೃತ್ಯ ಪ್ರಕಾರಗಳು ಮತ್ತು ಥೀಮ್ ಗಳಿದ್ದಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಕಳೆದ ಕೆಲವು ವಾರಗಳಿಂದ ಚಾನೆಲ್‌ನ ವೀಕೆಂಡ್ ಕಾರ್ಯಕ್ರಮಗಳಲ್ಲಿ ಪ್ರಮುಖ ಭಾಗವಾಗಿತ್ತು.
ಡಾ. ಶಿವರಾಜ್ ಕುಮಾರ್, Shiva Rajkumar ರಚಿತಾ ರಾಮ್, Rachitha Ram ಅರ್ಜುನ್ ಜನ್ಯ Arjun Janya ಮತ್ತು ವಿಜಯ್ ರಾಘವೇಂದ್ರ Vijaya Raghavendra ಅವ್ರು ಡಾನ್ಸ್ ಕರ್ನಾಟಕ ಡಾನ್ಸ್ ಶೋನ ತೀರ್ಪುಗಾರಾಗಿದ್ದರು. ಇನ್ನು ಈ ಶೋನ ನಿರೂಪಣೆಯನ್ನು ಎಲ್ಲರ ಅಚ್ಚುಮೆಚ್ಚಿನ ಅನುಶ್ರೀ Anushree ಮಾಡುತ್ತಿದ್ದಾರೆ. ಈ ಸೀಸನ್ ನಲ್ಲಿ ತೀರ್ಪುಗಾರರು ಸ್ಪರ್ಧಿಗಳ ಪರ್ಫಾಮನ್ಸ್ ನು ಹಾವ, ಭಾವ, ಕಾರ್ಡಿನೇಷನ್, ಓವರ್ ಆಲ್ ಪ್ರೆಸೆಂಟೇಷನ್ ಗಳನ್ನು ನೋಡಿ ತಮ್ಮ ತೀರ್ಪನ್ನು ನೀಡಿರುವುದು ಸ್ಪರ್ಧಿಗಳ ಮತ್ತಷ್ಟು ಇಂಪ್ರೂವ್ಮೆಂಟ್ ಗೆ ಕಾರಣಾವಾಯಿತು. ಈ ಶೋನಲ್ಲಿ ನೃತ್ಯದ ಮೂಲಕ ಕಥೆ ಹೇಳುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇಲ್ಲಿ ಶಾಸ್ತ್ರೀಯ, ಜಾನಪದ ಮತ್ತು ಸಿನಿಮಾ ಶೈಲಿಯ ನೃತ್ಯಗಳನ್ನು ವಿಷಯ ಅಥವಾ ಕಥೆಯ ಆಧಾರದ ಮೇಲೆ ಪ್ರದರ್ಶಿಸಲಾಗಿದ್ದು, ಇದು ವೀಕ್ಷಕರಿಗೆ ಭಾವನಾತ್ಮಕವಾಗಿ ಮತ್ತಷ್ಟು ಹತ್ತಿರವಾಯ್ತು.
ಪೂಜಾ ಮತ್ತು ಅನೂಪ್, ಸಿದ್ದೇಗೌಡ್ರು ಮತ್ತು ದೀಶಲ್, ಮೋಹಿತ್ ಮತ್ತು ಅನನ್ಯ, ಹರ್ಷ ಮತ್ತು ನಂದು ಹಾಗೂ ಶಿಕ್ಷಿತ್ ತಾಪಾ ಮತ್ತು ಸಂಜನಾ ಫೈನಲಿಸ್ಟ್ ಗಳಾಗಿದ್ದು ಇವರುಗಳ ನಡುವೆ ಗ್ರಾಂಡ್ ಫಿನಾಲೆಯಲ್ಲಿ ಪೈಪೋಟಿ ನಡೆಯಲಿದೆ. ವಿಭಿನ್ನ ಶೈಲಿಯ ನೃತ್ಯಗಳನ್ನು ಅದ್ಭುತವಾಗಿ ಪ್ರದರ್ಶಿಸಿದ ಎಲ್ಲಾ ಜೋಡಿಗಳು ಈಗ ಅಂತಿಮ ಸುತ್ತನ್ನು ತಲುಪಿದ್ದಾರೆ. ಫಿನಾಲೆ ಎಪಿಸೋಡ್ ನಲ್ಲಿ ಎಲ್ಲಾ ಜೋಡಿಗಳು ಪರ್ಫಾರ್ಮ್ ಮಾಡಿದ ನಂತರ ಈ ಸೀಸನ್ ನ ವಿಜೇತರು ಯಾರು ಅಂತ ಘೋಷಣೆ ಮಾಡಲಾಗುತ್ತದೆ. ಇನ್ನು ಡಾನ್ಸ್ ಕರ್ನಾಟಕ ಡಾನ್ಸ್ ಈ ಸೀಸನ್ ನ ವಿಜೇತರು ಯಾರಾಗಲಿದ್ದಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಜಾಸ್ತಿ ಆಗಿದೆ.
ಸೀಸನ್ ಈಗ ಅಂತಿಮ ಹಂತಕ್ಕೆ ಬಂದಿದ್ದು ಸ್ಪರ್ಧೆ ಮತ್ತಷ್ಟು ಕಠಿಣಗೊಂಡಿದ್ದೆ. ಫಿನಾಲೆಯಲ್ಲಿ ಪ್ರತಿ ಜೋಡಿಯು ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವುದರಿಂದ ಗೆಲ್ಲುವವರು ಯಾರು ಎಂದು ಹೇಳುವುದು ಕಷ್ಟವಾಗಿದೆ. ಈ ಅಂತಿಮ ಸಂಚಿಕೆಗಳಲ್ಲಿ ವಿಜೇತರು ಯಾರೆಂದು ತಿಳಿಯಲಿದ್ದು, ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ.
ಯಾರಾಗಲಿದ್ದಾರೆ ಡಾನ್ಸ್ ಕರ್ನಾಟಕ ಡಾನ್ಸ್ ಈ ಸೀಸನ್ ನ ವಿನ್ನರ್? ತಿಳ್ಕೊಳೋಕೆ ವೀಕ್ಷಿಸಿ ಜೀ ಕನ್ನಡ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















