ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೃತ್ಯ ವಿದುಷಿ ದರ್ಶಿನಿ ಮಂಜುನಾಥ್ ಅವರಿಗೆ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ #RevaUniversity ಪಿಎಚ್’ಡಿ ಪದವಿ ನೀಡಿ ಗೌರವಿಸಿದೆ.
ಭರತನಾಟ್ಯ #Bharatanatya ವಿದುಷಿ ದರ್ಶಿನಿ ಮಂಜುನಾಥ್ ಅವರು ಡಾ. ವಿದ್ಯಾ ಶಿಮ್ಲಡ್ಕ ಅವರ ಮಾರ್ಗದರ್ಶನದಲ್ಲಿ 19ನೇ ಮತ್ತು 20ನೇ ಶತಮಾನಗಳಲ್ಲಿ ಬೆಂಗಳೂರು ಪ್ರದೇಶದಲ್ಲಿನ ನೃತ್ಯದ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆ: ಭರತನಾಟ್ಯದ ವಿಶೇಷ ಉಲ್ಲೇಖ ಕುರಿತು ಮಂಡಿಸಿದ್ದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಅಲಂಕರಿಸಿದೆ.
ದರ್ಶಿನಿ ಅವರು ಬೆಂಗಳೂರಿನ #Bengaluru ನೃತ್ಯ ದಿಶಾ ಟ್ರಸ್ಟ್ ಕಲಾ ನಿರ್ದೇಶಕರೂ ಆಗಿದ್ದಾರೆ. 2004ರಲ್ಲಿ ನೃತ್ಯ ದಿಶಾ ಸಂಸ್ಥೆ ಆರಂಭಿಸಿ ಈವರೆಗೆ ಸಾವಿರಾರು ಮಕ್ಕಳಿಗೆ ಭರತನಾಟ್ಯ ಕಲೆ ಧಾರೆ ಎರೆದಿರುವುದು ವಿಶೇಷ.

ರೇವಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಿಎಚ್’ಡಿ ಪದವಿಯನ್ನು ಭರತನಾಟ್ಯ ವಿದುಷಿ ದರ್ಶಿನಿ ಮಂಜುನಾಥ್ ಅವರಿಗೆ ಪ್ರದಾನ ಮಾಡಲಾಯಿತು.
ವಿವಿಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಬಿ.ಪಿ. ದಿವಾಕರ್, ಉಪ ನಿರ್ದೇಶಕ ಡಾ.ವಿಶ್ವನಾಥ ಆರ್. ಹುಳಿ ಪಲ್ಲೇದ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post