ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಭೀಕರ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ನಟ ಸಂಚಾರಿ ವಿಜಯ್ ಅವರ ಸ್ಥಿತಿ ಗಂಭೀರವಾಗಿದ್ದು, ಮುಂದಿನ 48 ಗಂಟೆಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ ಎಂದು ವರದಿಯಾಗಿದೆ.ನಿನ್ನೆ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಸ್ನೇಹಿತನೊಂದಿಗೆ ಬೈಕ್’ನಲ್ಲಿ ತೆರಳುತ್ತಿದ್ದ ವೇಳೆ ಅಪಘಡ ಸಂಭವಿಸಿದೆ. ತತಕ್ಷಣವೇ ಆವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ವಿಜಯ್ ಅವರ ಮೆದುಳಿನಲ್ಲಿ ತೀವ್ರ ರಕ್ತ ಸ್ರಾವವಾಗಿದ್ದು, ತೊಡೆಯ ಮೂಳೆಯೂ ಸಹ ಮುರಿದಿದೆ. ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮುಂದಿನ 48 ಗಂಟೆಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಇನ್ನು, ಬೆಂಗಳೂರಿನಲ್ಲಿ ಬೈಕ್’ನಲ್ಲಿ ಸಂಚರಿಸುವ ಇಬ್ಬರೂ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ, ಕೊರೋನಾ ಲಾಕ್ ಡೌನ್ ಸಹ ನಗರದಲ್ಲಿ ಜಾರಿಯಲ್ಲಿದ್ದು, ಮನೆಯಿಂದ ಹೊರಕ್ಕೆ ಬರುವಂತಿಲ್ಲ. ಆದರೆ, ರಾತ್ರಿ ವೇಳೆಯಲ್ಲಿ ಬೈಕ್’ನಲ್ಲಿ ಅದರಲ್ಲೂ ಹೆಲ್ಮೆಟ್ ಧರಿಸದೇ ವಿಜಯ್ ಬೈಕ್’ನಲ್ಲಿ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಹೆಲ್ಮೆಟ್ ಧರಿಸದೇ ಇದ್ದುದೇ ಅವರ ತಲೆಗೆ ತೀವ್ರ ಪೆಟ್ಟಾಗಲು ಕಾರಣ ಎಂದು ಹೇಳಲಾಗಿದ್ದರೂ, ಅದಿನ್ನೂ ದೃಢಪಟ್ಟಿಲ್ಲ..
ಏನೇ ಆದರೂ, ಕನ್ನಡ ಚಿತ್ರರಂಗದ ಯುವ ಪ್ರಬುದ್ಧ ನಟ ಸಂಚಾರಿ ವಿಜಯ್ ಅವರಿಗೆ ಶೀಘ್ರ ಪ್ರಜ್ಞೆ ಮರಳಿ, ಗುಣಮುಖರಾಗಲಿ ಎಂದು ಕಲ್ಪ ಮೀಡಿಯಾ ಹೌಸ್ ಪ್ರಾರ್ಥಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post