ಬೆಂಗಳೂರು: ಕ್ರಿಸ್ಮಸ್ ಹಬ್ಬಕ್ಕೂ ಕೇಕ್’ಗೂ ಅವಿನಾಭಾವ ಸಂಬಂಧ. ಕೇಕ್ ಇಲ್ಲದೇ ಕ್ರಿಸ್ಮಸ್ ಇಲ್ಲವೆನ್ನುವಷ್ಟು ಒಂದಕ್ಕೊಂದು ಬೆಸೆದುಕೊಂಡಿವೆ.
ಈ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಈಗಾಗಲೇ ತಯಾರಿ ಆರಂಭವಾಗಿದ್ದು, ಕೆಐಎ ರಸ್ತೆಯ ಸ್ವಿಸ್ ಟೌನ್’ನಲ್ಲಿರುವ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ ಸ್ಪಾನಲ್ಲಿ ಕ್ರಿಸ್ಮಸ್ ಹಬ್ಬದ ಕೇಕ್ ತಯಾರಿಕೆಗೆ ವಿವಿಧ ಬಗೆಯ ಹಣ್ಣುಗಳನ್ನು ಒಟ್ಟಿಗೆ ಸುರಿಯುವ ಮೂಲಕ ಕೇಕ್ ಮಿಕ್ಸಿಂಗ್’ಗೆ ಚಾಲನೆ ನೀಡಿತು.
ರೆಸಾರ್ಟ್‌ನ ಮುಖ್ಯಸ್ಥರು, ಶೆಫ್, ಅತಿಥಿಗಳು, ಯುವಜನರು ಉತ್ಸಾಹದಿಂದ ಕೇಕ್ ಮಿಕ್ಸಿಂಗ್’ನಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಸುಮಾರು 1000 ಕೆಜಿ ತೂಕದ ಕೇಕ್ ತಯಾರಿಗಾಗಿ ಒಣ ಹಣ್ಣುಗಳು, ಕ್ಯಾಂಡಿಡ್ ಲೆಮೆನ್, ಕಿತ್ತಳೆಹಣ್ಣಿನ ಪೀಲ್, ದಾಲ್ಚಿನ್ನಿ, ಚೆರ್ರಿ ಹಣ್ಣುಗಳ ಜತೆಗೆ ದ್ರಾಕ್ಷಿ ಹಣ್ಣಿನ ವೈನ್, ರಮ್, ಜೇನುತುಪ್ಪ, ಬಾದಾಮಿ ತುಣುಕುಗಳನ್ನು ಹಾಕಿ ಖುಷಿಪಟ್ಟರು. ಕ್ರಿಸ್ಮಸ್ ಹೊತ್ತಿಗೆ ಈ ಕೇಕ್ ತಿನ್ನಲು ಸಿದ್ಧವಾಗಲಿದೆ ಎಂದು ಕ್ಲಾರ್ಕ್ಸ್ ಎಕ್ಸೋಟಿಕಾ ಶೆಫ್ ಸುರೇಶ್ ಮಾಹಿತಿ ನೀಡಿದರು.
ಈ ವೇಳೆ ಕ್ಲಾರ್ಕ್ಸ್ ಎಕ್ಸೋಟಿಕಾದ ಫೆಡ್ರಿಕ್ ಕೊಲಾಕೊ, ಜೋ ಕೊಲಾಕೊ, ಸಿಇಒ ಬಾಲಾಜಿ, ಹೋಟೆಲ್’ನ ಸಿಬ್ಬಂದಿಗಳು ಉಪಸ್ಥಿತರಿದ್ದರು.
Discussion about this post