ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಮಧ್ಯಾಹ್ನದಿಂದ ಸುರಿದ ಮಳೆಗೆ ಬನಶಂಕರಿ 3 ನೆಯ ಹಂತದ ಗುರುದತ್ತ ಬಡಾವಣೆ ಹಾಗೂ ದತ್ತಾತ್ರೇಯ ದೇವಾಲಯ ಜಲಾವೃತ್ತವಾಗಿತ್ತು.
ಹೊಸಕೇರಿ ಹಳ್ಳಿಯ ಗುರುದತ್ತ ಬಡಾವಣೆಯ ಬಳಿ ಹಾದು ಹೋಗಿರುವ ರಾಜ ಕಾಲುವೆಯ ತಡೆ ಗೋಡೆ ಒಡೆದು ಹೋಗಿದ್ದು ಅದರ ಕಾಮಾಗಾರಿಯು ನಡೆಯುತ್ತಿದ್ದು ನಿನ್ನೆ ಬೆಂಗಳೂರಿನ ಅನೇಕ ಪ್ರದೇಶಗಳು ಜಲಾವೃತವಾಗಿತ್ತು.
ಇಂದು ಗುರುದತ್ತ ಬಡಾವಣೆಯ ಬಳಿ ಇರುವ ದತ್ತಾತ್ರೇಯ ದೇವಾಲಯದ ಹಿಂಭಾಗ ಇರುವ ರಾಜ ಕಾಲುವೆ ಬಳಿ ಒಡೆದು ಹೋಗಿರುವ ತಡೆ ಗೋಡೆ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವ ಆರ್. ಅಶೋಕ್, ನಗರದ ಅನೇಕ ಕಡೆ ರಾಜ ಕಾಲುವೆ ಬಳಿ ಒತ್ತುವರಿಯಾಗಿದ್ದು ಅದನ್ನು ಪರಿಶೀಲಿಸಿದ ನಂತರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಬಗ್ಗೆ ಆದೇಶ ನೀಡಲಾಗಿದೆ ಎಂದರು.
ರಾಜ ಕಾಲುವೆ ಬಳಿ ಇರುವ ಮನೆಗಳ ನಾಗರೀಕರಿಗೆ ಸ್ಥಳಾಂತರ ವಾಗಲು ಆಗಲೇ ಸೂಚಿಸಲಾಗಿದೆ ಎಂದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಅನೇಕ ಅಧಿಕಾರಿಗಳು ಸ್ಥಳದಲ್ಲಿ ಇದ್ದರು.
ರಣ ಭೀಕರ ಮಳೆಗೆ ಸಿಲಿಕಾನ್ ಸಿಟಿ ತತ್ತರ
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಮಧ್ಯಾಹ್ನ 2.30 ರ ಸುಮಾರಿಗೆ ಒಂದೇ ಸಮ್ಮನೆ ಮಳೆ ಸುರಿಯಲು ಆರಂಭಿಸಿತ್ತು.
ಬನಶಂಕರಿಯ 3 ನೆಯ ಹಂತದ ಗುರುದತ್ತ ಬಡಾವಣೆಯ ಸಮೀಪದಲ್ಲಿ ಇರುವ ದತ್ತಾತ್ರೇಯ ದೇವಾಲಯ ಜಲಾವೃತ್ತವಾಗಿ ದತ್ತಾತ್ರೇಯ ದೇವಾಲಯದ ಸುತ್ತಲೂ ರಾಜ ಕಾಲುವೆಯ ಕೊಳಕು ನೀರು ತುಂಬಿ ದೇವಾಲಯ ದ್ವೀಪವಾಗಿತ್ತು.
ಸಿಲಿಕಾನ್ ಸಿಟಿ ಯಲ್ಲಿ ಅಬ್ಬರದ ಮಳೆ – ಗುರುದತ್ತ ಬಡಾವಣೆಯಲ್ಲಿ ರಾಜ ಕಾಲುವೆಯಿಂದ ಉಕ್ಕಿ ಹರಿದ ನೀರು ರಸ್ತೆಯ ಬದಿಯಲ್ಲಿ ಇರುವ ಅಂಗಡಿಗೆ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ಆಹಾರ ಪಾದಾರ್ಥ ಹಾಗೂ ಔಷಧಿಗಳು ಕೊಳಕು ನೀರಿನ ಪಾಲಾಗಿತ್ತು.
ಟಿಜಿ ಲೇಔಟ್ ನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ಮನೆಗಳಿಗೆ ಸತತವಾಗಿ ಮಳೆ ಸುರಿದ ಪರಿಣಾಮ ರಾಜ ಕಾಲುವೆಯಿಂದ ನೀರು ಉಕ್ಕಿ ಹರಿದು ರಸ್ತೆಯ ಬದಿಯಲ್ಲಿ ಮನೆ ಇರುವ ನಾಗರೀಕರು ನೀರನ್ನು ತೆಗೆದು ತೆಗೆದು ರಸ್ತೆಯ ಬದಿಯಲ್ಲಿ ಇರುವ ಚರಂಡಿಗೆ ಹಾಕುವುದರ ಮೂಲಕ ಅವರ ಮನೆಯ ಒಳಗೆ ಬಂದಿದ್ದ ನೀರನ್ನು ಹೊರಗೆ ಹಾಕಲು ಹರ ಸಾಹಸ ಪಟ್ಟರು.
ಹಿನ್ನೆಲೆ ಏನು ?
ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಗುರುದತ್ತ ಬಡಾವಣೆ ಯಲ್ಲಿ ಅಕ್ಟೋಬರ್ 20 ರಮಂಗಳವಾರ ರಾತ್ರಿ ಸುರಿದ ಅಬ್ಬರದ ಮಳೆ – ಗುರುದತ್ತ ಬಡಾವಣೆಯಲ್ಲಿ ರಾಜ ಕಾಲುವೆ ತಡೆಗೋಡೆ ಕುಸಿತವಾಗಿದೆ.
ಬನಶಂಕರಿ 3 ನೆಯ ಹಂತದ ಹೊಸಕೆರಿ ಹಳ್ಳಿಯ ಗುರುದತ್ತ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ತಡೆಗೋಡೆ ಕುಸಿದು ರಾಜ ಕಾಲುವೆಯಲ್ಲಿ ಹರಿಯುವ ಕೊಳಕು ನೀರು ಕಾಲುವೆಯ ಪಕ್ಕ ಇರುವ ಗುರುದತ್ತ ಬಡಾವಣೆ ನಾಲ್ಕು – ಐದು ನಿವಾಸಿಗಳ ಮನೆಗೆ ನುಗ್ಗಿ ನಾಗರೀಕರು ಪರಾದಾಡುವಂತೆ ಮಾಡಿತ್ತು.
ಬುಧವಾರ ಬಿಬಿಎಂಪಿ ಆಯುಕ್ತರು ಮಂಜುನಾಥ್ ಪ್ರಸಾದ್ ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಸ್ಥಳಕ್ಕೆ ಆಗಮಿಸಿದ್ದರು.
80 ಕಿಮೀ ರಾಜಕಾಲುವೆ ಇದ್ದು ಅದರಲ್ಲಿ ಸಿ.ಎಂ.ಸಿ ವ್ಯಾಪ್ತಿಯಲ್ಲಿ ಬರುತ್ತಿತ್ತು. ಈಗ ಮಹಾನಗರ ಪಾಲಿಕೆಗೆ ಒಳಪಟ್ಟಿದೆ. ಜೋರಾಗಿ ಮಳೆ ಬಂದ ಕಾರಣ ತಡೆ ಗೋಡೆ ಕುಸಿತವಾಗಿದ್ದು ಅದಕ್ಕೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಹೇಳಿದ್ದರು.
ಸ್ಥಳೀಯ ನಾಗರೀಕರ ಶಾಪ
ಇತ್ತೀಚಿಗೆ ಗುರುದತ್ತ ಬಡಾವಣೆಯ ರಸ್ತೆಯ ಬದಿಯಲ್ಲಿರುವ ರಾಜ ಕಾಲುವೆ ತಡೆಗೋಡೆ ಕುಸಿತಗೊಂಡಿದ್ದು ಮಹಾನಗರ ಪಾಲಿಕೆಯವರು ತಡೆ ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಒಂದೇ ಸಮನೆ ಸುರಿದ ರಣ ಭೀಕರ ಮಳೆಗೆ ರಸ್ತೆಯ ತುಂಬಾ ನೀರು ತುಂಬಿ ಹರಿಯುತ್ತಿದ್ದು, ನಾಗರಿಕರು ಪರಾದಡುತ್ತಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಇಲ್ಲಿನ ಸ್ಥಳೀಯ ನಾಗರೀಕರು ಹಿಡಿ ಶಾಪ ಹಾಕುತ್ತಾ ಮಳೆ ಬರುವ ಮುನ್ನವೇ ರಾಜ ಕಾಲುವೆ ದುರಸ್ತಿ ಕಾಮಗಾರಿ ಹಾಗೂ ಒಳ ಚರಂಡಿ ವ್ಯವಸ್ಥೆ ಸರಿ ಮಾಡಿದ್ದರೆ ಸಿಲಿಕಾನ್ ಸಿಟಿಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲ್ಲಿಲ್ಲ ಎಂಬುದು ನಾಗರೀಕರ ಅಭಿಪ್ರಾಯ.
ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಲಿ ಎಂದು ಸಿಲಿಕಾನ್ ಸಿಟಿ ನಾಗರೀಕರು ಒತ್ತಾಯಿಸಿದ್ದಾರೆ.
ಚಿತ್ರ ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post