ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ (Bengaluru) ಪ್ರಯಾhಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು ಯಶವಂತಪುರ–ಅಮೃತಸರ, ಅರಸೀಕೆರೆ–ಹಜರತ್ ನಿಜಾಮುದ್ದೀನ್ ಹಾಗೂ ಬೆಳಗಾವಿ–ಹಜರತ್ ನಿಜಾಮುದ್ದೀನ್ ನಡುವೆ ಒನ್-ವೇ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲಿದೆ. ಮೂರು ವಿಶೇಷ ರೈಲುಗಳೂ ಅ.8ರಂದು ಸಂಚರಿಸಲಿದ್ದು, ವಿವಿಧ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.
Bengaluru: ಯಶವಂತಪುರ–ಅಮೃತಸರ ವಿಶೇಷ ರೈಲು
ರೈಲು ಸಂಖ್ಯೆ 06539 ಯಶವಂತಪುರ–ಅಮೃತಸರ ಒನ್-ವೇ ವಿಶೇಷ ಎಕ್ಸ್ಪ್ರೆಸ್ ಅ.8ರಂದು ರಾತ್ರಿ 10.40ಕ್ಕೆ ಯಶವಂತಪುರದಿಂದ ಹೊರಟು, ಭಾನುವಾರ ಮಧ್ಯಾಹ್ನ 1.50ಕ್ಕೆ ಅಮೃತಸರ ತಲುಪಲಿದೆ.
ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಅದೋನಿ, ಮಂತ್ರಾಲಯಂ ರೋಡ್, ರಾಯಚೂರು, ವಾಡಿ, ಕಲಬುರಗಿ, ಸೋಲಾಪುರ, ಕುರ್ದುವಾಡಿ, ದೌಂಡ್ ಜಂಕ್ಷನ್, ಅಹಿಲ್ಯಾನಗರ, ಕೊಪರ್ಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಚಿತ್ರಕೂಟಧಾಮ ಕರ್ವಿ, ಬಂದಾ ಜಂಕ್ಷನ್, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಜಂಕ್ಷನ್, ಆಗ್ರಾ ಕ್ಯಾಂಟ್, ಹಜರತ್ ನಿಜಾಮುದ್ದೀನ್, ನವದೆಹಲಿ, ಅಂಬಾಲಾ ಕ್ಯಾಂಟ್ ಜಂಕ್ಷನ್, ಲೂಧಿಯಾನ ಜಂಕ್ಷನ್, ಜಲಂಧರ್ ಸಿಟಿ ಜಂಕ್ಷನ್ ಹಾಗೂ ಬಿಯಾಸ್ ಜಂಕ್ಷನ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲಿನಲ್ಲಿ 11 ಸ್ಲೀಪರ್ ಕ್ಲಾಸ್, 7 ಜನರಲ್ ದ್ವಿತೀಯ ದರ್ಜೆ ಬೋಗಿಗಳು ಹಾಗೂ ದಿವ್ಯಾಂಗಸ್ನೇಹಿ ವ್ಯವಸ್ಥೆ ಹೊಂದಿರುವ 2 ದ್ವಿತೀಯ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 20 ಬೋಗಿಗಳಿರಲಿವೆ.
ಅರಸೀಕೆರೆ–ಹಜರತ್ ನಿಜಾಮುದ್ದೀನ್ ವಿಶೇಷ ರೈಲು
ರೈಲು ಸಂಖ್ಯೆ 06261 ಅರಸೀಕೆರೆ–ಹಜರತ್ ನಿಜಾಮುದ್ದೀನ್ ಒನ್-ವೇ ವಿಶೇಷ ಎಕ್ಸ್ಪ್ರೆಸ್ ಅ.8ರಂದು ಸಂಜೆ 4.45ಕ್ಕೆ ಅರಸೀಕೆರೆಯಿಂದ ಹೊರಟು, ಶನಿವಾರ ಸಂಜೆ 4 ಗಂಟೆಗೆ ಹಜರತ್ ನಿಜಾಮುದ್ದೀನ್ ತಲುಪಲಿದೆ.
ಮಾರ್ಗಮಧ್ಯದಲ್ಲಿ ಬೀರೂರು, ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಬದಾಮಿ, ಬಾಗಲಕೋಟೆ, ವಿಜಯಪುರ, ಸೋಲಾಪುರ, ಕುರ್ದುವಾಡಿ, ದೌಂಡ್, ಅಹಿಲ್ಯಾನಗರ, ಕೊಪರ್ಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಚಿತ್ರಕೂಟಧಾಮ ಕರ್ವಿ, ಬಂದಾ, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಜಂಕ್ಷನ್ ಹಾಗೂ ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲು 10 ಸ್ಲೀಪರ್ ಕ್ಲಾಸ್, 8 ಜನರಲ್ ದ್ವಿತೀಯ ದರ್ಜೆ ಬೋಗಿಗಳು ಹಾಗೂ ದಿವ್ಯಾಂಗಸ್ನೇಹಿ ವ್ಯವಸ್ಥೆ ಹೊಂದಿರುವ 2 ದ್ವಿತೀಯ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿರಲಿದೆ.
ಬೆಳಗಾವಿ–ಹಜರತ್ ನಿಜಾಮುದ್ದೀನ್ ವಿಶೇಷ ರೈಲು
ರೈಲು ಸಂಖ್ಯೆ 07331 ಬೆಳಗಾವಿ–ಹಜರತ್ ನಿಜಾಮುದ್ದೀನ್ ಒನ್-ವೇ ವಿಶೇಷ ಎಕ್ಸ್ಪ್ರೆಸ್ ಅ.8ರಂದು ಸಂಜೆ 6.30ಕ್ಕೆ ಬೆಳಗಾವಿಯಿಂದ ಹೊರಟು, ಶನಿವಾರ ಮಧ್ಯಾಹ್ನ 3 ಗಂಟೆಗೆ ಹಜರತ್ ನಿಜಾಮುದ್ದೀನ್ ತಲುಪಲಿದೆ.
ಈ ರೈಲು ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್, ಅಹಿಲ್ಯಾನಗರ, ಕೊಪರ್ಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಚಿತ್ರಕೂಟಧಾಮ ಕರ್ವಿ, ಬಂದಾ, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಜಂಕ್ಷನ್ ಹಾಗೂ ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
Also Read>> ಅ.10ರಂದು ರಾಜ್ಯಮಟ್ಟದ ‘ವಿಶ್ವಕರ್ಮ ವೈಭವ ರತ್ನ’ ಹಾಗೂ ‘ಕರ್ನಾಟಕ ವೈಭವ ರತ್ನ’ ಪ್ರಶಸ್ತಿ ಪ್ರದಾನ
ಈ ರೈಲಿನಲ್ಲಿ 9 ಸ್ಲೀಪರ್ ಕ್ಲಾಸ್, 9 ಜನರಲ್ ದ್ವಿತೀಯ ದರ್ಜೆ ಬೋಗಿಗಳು ಹಾಗೂ ದಿವ್ಯಾಂಗಸ್ನೇಹಿ ವ್ಯವಸ್ಥೆ ಹೊಂದಿರುವ 2 ದ್ವಿತೀಯ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 20 ಬೋಗಿಗಳಿರಲಿವೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ಒನ್-ವೇ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದ್ದು, ಸಂಬಂಧಪಟ್ಟ ನಿಲ್ದಾಣಗಳಲ್ಲಿ ಪ್ರಯಾಣಿಕರು ಇದರ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








