ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಒಂದು ವರ್ಷದ ಹಿಂದೆ ಮಾಡಲಾಗಿದ್ದ ಮೆಟ್ರೋ ದರ ಏರಿಕೆಯಿಂದ ಕಂಗಾಗಲಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಮಟ್ರೋದರವನ್ನು ಮತ್ತೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಒಂದು ವರ್ಷದ ಹಿಂದೆ ಮೆಟ್ರೋ ಪ್ರಯಾಣ ದರವನ್ನು ಶೇ. 71.5 ರಷ್ಟು ಹೆಚ್ಚಳ ಮಾಡಿದ್ದ ಬೆಂಗಳೂರು ಮೆಟ್ರೋ #BengaluruMetro ರೈಲು ಕಾರ್ಪೋರೇಷನ್ ಲಿಮಿಟೆಡ್ ಈಗ ಶೇ.5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ.
ಪ್ರತಿ ವರ್ಷ ಶೇಷ.5ರಷ್ಟು ಪ್ರಯಾಣ ದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ 2025ರಲ್ಲಿ ಬಿಎಂಆರ್’ಸಿಎಲ್ #BMRCL ಶಿಫಾರಸು ಮಾಡಿತ್ತು.
ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ ಬಿಎಂಆರ್’ಸಿಎಲ್ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು ಶೇ.5 ರಷ್ಟು ಏರಿಸಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಬಿಎಂಆರ್’ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ನೂತನ ಪರಿಷ್ಕೃತ ದರ ಫೆ.9ರ ಸೋಮವಾರದಿಂದ ಜಾರಿಗೆ ಬರಲಿದೆ.
ಪರಿಷ್ಕೃತ ದರದಂತೆ ಕನಿಷ್ಠ 1 ರೂ. ಹಾಗೂ ಗರಿಷ್ಠ 5 ರೂ. ಹೆಚ್ಚಳವಾಗಲಿದೆ. ಕನಿಷ್ಠ 10 ಇರುವ ದರ 11ಕ್ಕೆ, ಗರಿಷ್ಠ 90 ಇರುವ ದರ 95ಕ್ಕೆ ಏರಿಕೆಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















