ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೇಸಿಗೆ ರಜೆಯಲ್ಲಿ Summer Holiday ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆಯು South Western Railway ಯಶವಂತಪುರ- ದಾನಾಪುರ – ಬೆಂಗಳೂರು ಕಂಟೋನ್ಮೆಂಟ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ Yashawanthapur – Danapura – Bengaluru Cantonment Special Express Train ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06579 ಯಶವಂತಪುರ – ದಾನಾಪುರ ವಿಶೇಷ ಎಕ್ಸ್ಪ್ರೆಸ್:
ಈ ರೈಲು ಏಪ್ರಿಲ್ 20, 2026 ರಂದು (ಸೋಮವಾರ) ಬೆಳಿಗ್ಗೆ 07:00 ಗಂಟೆಗೆ ಯಶವಂತಪುರದಿಂದ ಹೊರಟು, ಬುಧವಾರ ಮಧ್ಯಾಹ್ನ 01:15 ಗಂಟೆಗೆ ದಾನಾಪುರ ತಲುಪಲಿದೆ.
ರೈಲು ಸಂಖ್ಯೆ 06580 ದಾನಾಪುರ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ಪ್ರೆಸ್:
ಈ ರೈಲು ಏಪ್ರಿಲ್ 23, 2026 ರಂದು (ಗುರುವಾರ) ಬೆಳಿಗ್ಗೆ 10:30 ಗಂಟೆಗೆ ದಾನಾಪುರದಿಂದ ಹೊರಟು, ಶನಿವಾರ ರಾತ್ರಿ 10:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ನಿಲುಗಡೆಗಳು: ಯಲಹಂಕ, ಹಿಂದೂಪುರ, ಧರ್ಮಾವರಂ, ಡೋನ್, ಮೆಹಬೂಬ್ನಗರ, ಕಾಚಿಗುಡ, ಕಾಜಿಪೇಟ್, ರಾಮಗುಂಡಂ, ಬಲ್ಹರ್ಷಾ, ನಾಗ್ಪುರ್, ಇಟಾರ್ಸಿ, ಜಬಲ್ಪುರ್, ಕಟ್ನಿ, ಸತ್ನಾ, ಮಾಣಿಕ್ಪುರ್, ಪ್ರಯಾಗ್ರಾಜ್ ಛಿವಕಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್ ಮತ್ತು ಅರಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ರೈಲಿನಲ್ಲಿ ಒಟ್ಟು 19 ಬೋಗಿಗಳಿರಲಿದ್ದು, ಇದರಲ್ಲಿ ಎರಡು ಎಸಿ 2-ಟೈರ್, ನಾಲ್ಕು ಎಸಿ 3-ಟೈರ್, ಏಳು ಸ್ಲೀಪರ್ ಕ್ಲಾಸ್, ನಾಲ್ಕು ದ್ವಿತೀಯ ದರ್ಜೆ ಮತ್ತು ಎರಡು ಲಗೇಜ್/ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















