ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೇಸಿಗೆಯಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ಉತ್ತರ ಮಧ್ಯ ರೈಲ್ವೆ North Central Railway ರೈಲು ಸಂಖ್ಯೆ 04131/04132 ಕಾನ್ಪುರ ಸೆಂಟ್ರಲ್ – ಬೆಂಗಳೂರು – ಕಾನ್ಪುರ ಸೆಂಟ್ರಲ್ ಸಾಪ್ತಾಹಿಕ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸಲಿದೆ.
04131 ಸಂಖ್ಯೆಯ ವಿಶೇಷ ರೈಲು ಪ್ರತಿ ಭಾನುವಾರ ಸಂಜೆ 4:30 ಕ್ಕೆ ಕಾನ್ಪುರ ಸೆಂಟ್ರಲ್’ನಿಂದ 05.04.2026 ರಿಂದ 12.07.2026 ರವರೆಗೆ ಹೊರಡುತ್ತದೆ ಮತ್ತು ಮೂರನೇ ದಿನ (ಮಂಗಳವಾರ) ಸಂಜೆ 6:30 ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 04132 ಪ್ರತಿ ಬುಧವಾರ ಬೆಳಿಗ್ಗೆ 7:10 ಕ್ಕೆ ಬೆಂಗಳೂರಿನಿಂದ ಹೊರಟು ಮೂರನೇ ದಿನ (ಶುಕ್ರವಾರ) ಬೆಳಿಗ್ಗೆ 3:45 ಕ್ಕೆ ಕಾನ್ಪುರ ಸೆಂಟ್ರಲ್ ತಲುಪುತ್ತದೆ.
ಎಲ್ಲೆಲ್ಲಿ ನಿಲುಗಡೆ?
ಮಾರ್ಗದಲ್ಲಿ ರೈಲುಗಳು ಫತೇಪುರ್, ಪ್ರಯಾಗ್ರಾಜ್ ಜಂ., ಶಂಕರಗಢ, ದಬೌರಾ, ಮಾಣಿಕ್ಪುರ್ ಜೂ., ಸತ್ನಾ, ಕಟ್ನಿ ಜಂ., ಮದನ್ ಮಹಲ್, ಇಟಾಸಿರ್ ಜಂ., ನಾಗ್ಪುರ, ಬಲ್ಹಷಾರ್, ಸಿರ್ಪುರ ಕಾಘಜನಗರ, ಬೆಳ್ಳಂಪಲ್ಲಿ, ಮಂಚಿರಿಯಾಲ್, ವಾರಂಗಲ್, ಚಿವಾಡಾ ಖಮ್ಮಂ, ವಿಜಯಾ ಖಮ್ಮಂನಲ್ಲಿ ನಿಲುಗಡೆಯಾಗುತ್ತವೆ. ರೇಣಿಗುಂಟಾ ಜೂ., ಕಟಪಾಡಿ ಜೂ., ಜೋಲಾರಪೇಟೆ ಜೂ., ಬಂಗಾರಪೇಟೆ ಜೂ., ಮತ್ತು ಕೃಷ್ಣರಾಜಪುರಂ ನಿಲ್ದಾಣಗಳು ಎರಡೂ ದಿಕ್ಕುಗಳಲ್ಲಿ ನೀಡಲಿದೆ.
ಎಷ್ಟು ಬೋಗಿ ಇರಲಿವೆ?
ರೈಲು 23 ಕೋಚ್ಗಳ ಸಂಯೋಜನೆಯನ್ನು ಹೊಂದಿರುತ್ತದೆ, ಇದರಲ್ಲಿ 9 ಜನರಲ್ ಸೆಕೆಂಡ್ ಕ್ಲಾಸ್, 9 ಸ್ಲೀಪರ್ ಕ್ಲಾಸ್, 2 ಎಸಿ-3 ಟೈರ್, 1 ಎಸಿ-2 ಟೈರ್ ಮತ್ತು 2 ಎಸ್’ಎಲ್’ಆರ್/ಡಿ ಕೋಚ್’ಗಳನ್ನು ಒಳಗೊಂಡಿರುತ್ತದೆ.
ಬೆಂಗಳೂರು ಕಂಟೋನ್ಮೆಂಟ್ ಮತ್ತು ಚೆನ್ನೈ ವಿಶೇಷ ರೈಲು ಸಂಚಾರ
ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸೇವೆಯನ್ನು ಓಡಿಸಲಿದೆ.
06545 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್ – ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ವಿಶೇಷ ಎಕ್ಸ್’ಪ್ರೆಸ್ ರೈಲು ಏಪ್ರಿಲ್ 9 (ಗುರುವಾರ) ರಂದು ಬೆಳಿಗ್ಗೆ 08:05ಕ್ಕೆ ಬೆಂಗಳೂರು ಕಂಟೋನ್ಮೆಂಟ್’ನಿಂದ ಹೊರಟು, ಅಂದು ಮಧ್ಯಾಹ್ನ 3 ಗಂಟೆಗೆ ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ.
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06546 ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್’ಪ್ರೆಸ್ ರೈಲು ಏಪ್ರಿಲ್ 9 (ಗುರುವಾರ) ರಂದು ಸಂಜೆ 04:45ಕ್ಕೆ ಚೆನ್ನೈ ಸೆಂಟ್ರಲ್’ನಿಂದ ಹೊರಟು, ಅಂದು ರಾತ್ರಿ 11:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ಆಗಮಿಸಲಿದೆ.
ಈ ವಿಶೇಷ ರೈಲು ಒಟ್ಟು 21 ಬೋಗಿಗಳನ್ನು ಒಳಗೊಂಡಿರಲಿದೆ: 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು, 15 ಸ್ಲೀಪರ್ ಕ್ಲಾಸ್ ಬೋಗಿಗಳು 2 ಎಸ್’ಎಲ್’ಆರ್/ಡಿ ಬೋಗಿಗಳು.
ಎಲ್ಲೆಲ್ಲಿ ನಿಲುಗಡೆ ನೀಡಲಿದೆ?
ಈ ರೈಲು ಮಾರ್ಗಮಧ್ಯೆ ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್’ಪೇಟೆ, ಕಾಟ್ಪಾಡಿ, ಶೋಲಿಂಗರ್, ಅರಕ್ಕೋಣಂ, ತಿರುವಳ್ಳೂರು ಮತ್ತು ಪೆರಂಬೂರ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ರೈಲು ಸಂಖ್ಯೆ 06546 (ಚೆನ್ನೈ- ಬೆಂಗಳೂರು) ಮರುಪ್ರಯಾಣದ ಸಮಯದಲ್ಲಿ ಪೆರಂಬೂರ್ ನಿಲ್ದಾಣದಲ್ಲಿ ನಿಲುಗಡೆಯನ್ನು ಹೊಂದಿರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















