ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ರಾತ್ರಿ ಮಾಸ್ಕ್ ಧರಿಸಿ ಮಾರುವೇಷದಲ್ಲಿ ಸಿಟಿ ರೌಂಡ್ಸ್ ಕೈಗೊಂಡು, ಪ್ರಯಾಣಿಕನ ಸೋಗಿನಲ್ಲಿ BMTC ಬಸ್‌ಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ವೇಳೆ ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕ ಪ್ರಯಾಣಿಕನನ್ನು ಬಸ್‌ನಿಂದ ಇಳಿಸಿದ ಘಟನೆ ಕುರಿತು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, “ಇದು ಚಿಲ್ಲರೆ ಕಾಸಿನ ಕಾಲವಲ್ಲ; ಇಂದು ಎಲ್ಲೆಡೆ QR ಕೋಡ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇದೆ” ಎಂದು ತಿಳಿಸಿದ್ದಾರೆ.
ಸಚಿವರ ಸಿಟಿ ರೌಂಡ್ಸ್ ಕುರಿತು ಮಾಹಿತಿ ಸಿಕ್ಕ ತಕ್ಷಣ ಹಲವು ಬಾರಿ ಕರೆ ಮಾಡಿದರೂ ಮಾತನಾಡಲು ಅವಕಾಶ ಸಿಗಲಿಲ್ಲ. ಆದರೆ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು ಎಂದು ಅವರು ಹೇಳಿದ್ದಾರೆ. ಸಚಿವರು ಮಾರುವೇಷದಲ್ಲಿ ತೆರಳಿ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲಿಸಿರುವುದು ಶ್ಲಾಘನೀಯ ಎಂದಿದ್ದಾರೆ.
Also read: ಎಸ್. ಜಾನಕಿ ನಿಧನ : ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ಸಂತಾಪ
“ಸಚಿವರು 100 ರೂಪಾಯಿ ನೋಟು ನೀಡಿದಾಗ ಕಂಡಕ್ಟರ್ ಚಿಲ್ಲರೆ ಕೇಳಿರುವುದು ಸಹಜ. ಆದರೆ ಇಂದಿನ ಕಾಲದಲ್ಲಿ QR ಕೋಡ್ ಪಾವತಿ ವ್ಯವಸ್ಥೆ ಎಲ್ಲೆಡೆ ಲಭ್ಯವಿರುವಾಗ, BMTC ಬಸ್‌ಗಳ ಟಿಕೆಟ್ ಯಂತ್ರದಲ್ಲಿಯೇ ಈ ವ್ಯವಸ್ಥೆ ಇರಬೇಕು ಎಂಬುದು ನನ್ನ ಮಾಹಿತಿ. ಹಾಗಿದ್ದರೂ ಈ ಅನುಭವ ಹೇಗೆ ಆಯಿತು?” ಎಂದು ಅವರು ಪ್ರಶ್ನಿಸಿದ್ದಾರೆ.
ಸಂಜೆ 7.10ರಿಂದ ರಾತ್ರಿ 9.10ರವರೆಗೆ ಸುಮಾರು ಎರಡು ಗಂಟೆಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿದ ಸಚಿವ ಬೈರತಿ ಸುರೇಶ್, 10ಕ್ಕೂ ಹೆಚ್ಚು BMTC ಬಸ್‌ಗಳಲ್ಲಿ ಪ್ರಯಾಣಿಸಿದರು. ಜಯಮಹಲ್, ಆರ್.ಟಿ.ನಗರ, ಹೆಬ್ಬಾಳ, ನಾಗವಾರ, ಹೆಣ್ಣೂರು ಹಾಗೂ ಗೆದ್ದಲಹಳ್ಳಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಪಡೆದು ಪ್ರಯಾಣಿಸಿದರು.
ಇದೇ ವೇಳೆ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ಮುಂದುವರೆದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಕೈ ತೋರಿದರೂ ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಹಿನ್ನೆಲೆ, ಕೆಎ-57 ಎಫ್ 3372 ಸಂಖ್ಯೆಯ BMTC ಬಸ್ ಚಾಲಕ ಮುಷ್ತಾಕ್ ಹಾಗೂ ನಿರ್ವಾಹಕ ದಯಾನಂದ್ ವಿರುದ್ಧ ಅಮಾನತು ಕ್ರಮಕ್ಕೆ ಸಚಿವರು ಸೂಚನೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








