No Result
View All Result
SWR Mysuru Division Excels with Record Passenger Revenue and Strong Commercial Growth
English Articles

SWR Mysuru Division Excels with Record Passenger Revenue and Strong Commercial Growth

by ಕಲ್ಪ ನ್ಯೂಸ್
April 2, 2026
0

Kalpa Media House  |  Mysuru | The Mysuru Division has recorded an exceptional performance during the financial year 2025–26, achieving...

Read moreDetails
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
  • Advertise With Us
  • Grievances
  • About Us
  • Contact Us
Thursday, April 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಲಾಲಸೆಗೆ ಮಿತಿ ಇಲ್ಲದಾಗ, ಭ್ರಷ್ಟಾಚಾರ ಅನಿವಾರ್ಯವಾಗುತ್ತದೆ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 17, 2026
in ಬೆಂಗಳೂರು ನಗರ
0
ಲಾಲಸೆಗೆ ಮಿತಿ ಇಲ್ಲದಾಗ, ಭ್ರಷ್ಟಾಚಾರ ಅನಿವಾರ್ಯವಾಗುತ್ತದೆ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಭಾರತದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೈನ್ (ಡೀಮ್ಡ್ -ಟು-ಬಿ) ವಿಶ್ವವಿದ್ಯಾಲಯವು “ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮಗಳು” ಎಂಬ ವಿಷಯದ ಮೇಲೆ ಸಮ್ಮೇಳನವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಭಾರತದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ #Justice Santosh Hegde ಅವರು ಮುಖ್ಯ  ಅತಿಥಿಯಾಗಿ ಆಗಮಿಸಿದ್ದರು.

ಸಮಕಾಲೀನ ಸಮಾಜದಲ್ಲಿ ನೈತಿಕ ಮೌಲ್ಯಗಳ ಅಗತ್ಯತೆ ಕುರಿತು ಮಾತನಾಡಿದ ಅವರು, ಲಾಲಸೆ ಮತ್ತು ಕುಸಿಯುತ್ತಿರುವ ನೈತಿಕತೆಯ ಪರಿಣಾಮಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ  ಅವರು “ಇಂದಿನ ಸಮಾಜದ ಅನೇಕ ಸಮಸ್ಯೆಗಳ ಮೂಲ ಕಾರಣ ನಿಯಂತ್ರಣವಿಲ್ಲದ ಲಾಲಸೆ. ಲಾಲಸೆಗೆ ಮಿತಿ ಇಲ್ಲದಾಗ ಭ್ರಷ್ಟಾಚಾರ ಅನಿವಾರ್ಯವಾಗುತ್ತದೆ” ಎಂದು  ಹೇಳಿದರು.
ಸಮಾಜದ ಆದ್ಯತೆಗಳು ಮತ್ತು ಮೌಲ್ಯಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು, ಪ್ರಾಮಾಣಿಕತೆಗೆ ಇಂದಿನ ಸಮಾಜದಲ್ಲಿ  ಗೌರವ ಕಡಿಮೆಯಾಗಿರುವುದನ್ನು ಉಲ್ಲೇಖಿಸಿದರು. ಹಾಗೂ  “ಒಮ್ಮೆ ಸಮಾಜವು ಪ್ರಾಮಾಣಿಕತೆಯನ್ನು ಗೌರವಿಸುತ್ತಿತ್ತು ಮತ್ತು ತಪ್ಪು ಮಾಡಿದವರನ್ನು ಕಠಿಣ ನೈತಿಕ ಮೌಲ್ಯಗಳ ಮೂಲಕ ಶಿಕ್ಷಿಸುತ್ತಿತ್ತು. ಇಂದು ಹಣ ಮತ್ತು ಅಧಿಕಾರಕ್ಕೆ ಗೌರವ ಸಿಗುತ್ತಿದೆ; ಆದರೆ ಪ್ರಾಮಾಣಿಕತೆಯನ್ನು ಕಡೆಗಣಿಸಲಾಗುತ್ತಿದೆ.” ಎಂದು ಅವರು ಹೇಳಿದರು.

ನೈತಿಕ ಆಶಯದ ಮಹತ್ವವನ್ನು ವಿವರಿಸುತ್ತಾ ಅವರು ಸಂತೃಪ್ತಿಯ ನಿಜವಾದ ಅರ್ಥವನ್ನು ವಿವರಿಸಿದರು “ಸಂತೃಪ್ತಿ ಎಂದರೆ ಆಸೆಯಿಲ್ಲದಿರುವುದು ಅಲ್ಲ; ಅದು ಸತ್ಯ ಮತ್ತು ನ್ಯಾಯಯುತ ಮಾರ್ಗದಲ್ಲಿ ಯಶಸ್ಸನ್ನು ಸಾಧಿಸುವ ಸಾಮರ್ಥ್ಯ” ಎಂದು ಅಭಿಪ್ರಾಯಪಟ್ಟರು.

ಇದರೊಂದಿಗೆ ಅವರು “ನಿಜವಾದ ಸಂತೋಷವು ಪ್ರಾಮಾಣಿಕ ಆದಾಯದಿಂದ ಬರುತ್ತದೆ; ಅಕ್ರಮವಾಗಿ ಗಳಿಸಿದ ಸಂಪತ್ತಿನಿಂದ ಅಲ್ಲ”, ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜೈನ್ (ಡೀಮ್ಡ್ -ಟು-ಬಿ) ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸಲರ್ ಡಾ. ದಿನೇಶ್ ನೀಲಕಂಠ್ ಮಾತನಾಡಿ ಸಾಮಾಜಿಕ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು ಮತ್ತು “ಸಿದ್ಧಾಂತಗಳಿಲ್ಲದ ಪ್ರಗತಿ ಎಂದರೆ ಉದ್ದೇಶವಿಲ್ಲದ ಸಮೃದ್ಧಿ. ಮಾನವ ಮೌಲ್ಯಗಳು ಪರಂಪರೆ ಮಾತ್ರವಲ್ಲ, ಅವು ನಮ್ಮ ವರ್ತನೆ ಮತ್ತು ಮನೋಭಾವವನ್ನು ಮಾರ್ಗದರ್ಶಿಸುವ ನೈತಿಕ ದಿಕ್ಕು ತೋರಿಸುವ ಸಾಧನ. ಇಂದಿನ ಪ್ರಗತಿಯ ಪೈಪೋಟಿಯ ಜಗತ್ತಿನಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆ ಕಡಿಮೆಯಾಗುತ್ತಿರುವಾಗ, ನಾವು ಭೌತಿಕವಾಗಿ ಅಭಿವೃದ್ಧಿಯಾದರೂ ನೈತಿಕವಾಗಿ ದಿವಾಳಿಯಾದ ಭವಿಷ್ಯವನ್ನು ನಿರ್ಮಿಸುವ ಅಪಾಯದಲ್ಲಿದ್ದೇವೆ.” ಎಂದು ಹೇಳಿದರು.

ವಿಚಾರಸಂಕಿರಣದ ಆಯೋಜಕಿಯಾದ  ಸಹ-ಪ್ರಾಧ್ಯಾಪಕಿ ಡಾ. ಟಿ ರೂಪಾ ಅವರು “ಮಾನವೀಯತೆ ಎಂಬುದು ಅಪರಿಚಿತರನ್ನು ಒಂದು ಕುಟುಂಬದಂತೆ ಬೆಸೆಯುವ ಅತ್ಯಂತ ಸೂಕ್ಷ್ಮವಾದ ನೂಲು.ಸಹಾನುಭೂತಿ ಎಂಬುದು ಮಾನವೀಯತೆಯ ಹೃದಯಬಡಿತವಿದ್ದಂತೆ, ಆ ಸಹಾನುಭೂತಿ ಇಲ್ಲವಾದಲ್ಲಿ ಹೃದಯ ಬಡಿತ  ಕೇವಲ ಗದ್ದಲವಾಗಷ್ಟೇ ಉಳಿಯುತ್ತೇವೆ,” ಎಂದು ನುಡಿದರು.
ಇದೇ ಸಂದರ್ಭದಲ್ಲಿ ಅವರು ಕಾರ್ಯಕ್ರಮದ ಸಂಘಟನಾ ಸಮಿತಿಯ ಶ್ರಮವನ್ನು ಶ್ಲಾಘಿಸಿದರು. ಜೊತೆಗೆ ಎನ್‌ಸಿಸಿ (NCC) ಕೆಡೆಟ್‌ಗಳು ಮತ್ತು ಎನ್‌ಸಿಸಿ ಅಧಿಕಾರಿ ಮೇಜರ್ ರೇಖಾ ಸಿನ್ಹಾ ಅವರ ಅವಿರತ ಪ್ರಯತ್ನಗಳನ್ನು ವಿಶೇಷವಾಗಿ ಗುರುತಿಸಿ ಪ್ರಶಂಸಿಸಿದರು.

ಈ ಸಮ್ಮೇಳನವು  ಉತ್ತಮ ಮತ್ತು ನೈತಿಕ ಭವಿಷ್ಯ ನಿರ್ಮಾಣಕ್ಕೆ ಸಾಮಾಜಿಕ ಮೌಲ್ಯಗಳ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿತು. ಜೊತೆಗೆ ಇಂದಿನ ಸಮಾಜದಲ್ಲಿ ನಾಗರಿಕರ ನೈತಿಕ, ಸಾಂಸ್ಕೃತಿಕ ಮತ್ತು ಸಂವಿಧಾನಾತ್ಮಕ ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿಗಳ ಚಿಂತನೆಗೆ ಉತ್ತೇಜನ ನೀಡಿತು.

ವರದಿ: ರಾಘವೇಂದ್ರ ಅಡಿಗ ಎಚ್ಚೆನ್  

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: BENGALURUJustice Santosh HegdeKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಬೆಂಗಳೂರು
Share202Tweet126Send
Previous Post

ಶಿವಮೊಗ್ಗ | ಈ ಬಾರಿ ಮಾರಿಕಾಂಬೆಗೆ 1.6 ಕೆಜಿ ತೂಕದ ಚಿನ್ನದ ಮುಖವಾಡ ವಿಶೇಷ

Next Post

ಕನ್ನಡದ ಹೆಸರಾಂತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕನ್ನಡದ ಹೆಸರಾಂತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

ಕನ್ನಡದ ಹೆಸರಾಂತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ತಿರುಪತಿ, ಹುಬ್ಬಳ್ಳಿ, ಹೈದರಾಬಾದ್ ಸೇರಿ ಹಲವು ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ

April 2, 2026
ಬೈಯಪ್ಪನಹಳ್ಳಿ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವಿನ ಹೊಸ ರೈಲು ಮಾರ್ಗ ವೇಗ ಪರೀಕ್ಷೆ

ಬೈಯಪ್ಪನಹಳ್ಳಿ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವಿನ ಹೊಸ ರೈಲು ಮಾರ್ಗ ವೇಗ ಪರೀಕ್ಷೆ

April 2, 2026
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಸಾಗರ | ಹೊಟೇಲ್ ಓನರ್ ಕಾರಲ್ಲಿ ಪತ್ತೆಯಾಯ್ತು ಬಿಹಾರಿ ಯುವಕನ ಶವ | ಎಸ್ಪಿ ನಿಖಿಲ್ ಹೇಳಿದ್ದೇನು?

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL