ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಪ್ರತಿ ವರ್ಷಕ್ಕಿಂತಲೂ ಈ ಬಾರಿ ವಾತಾವರಣ ವಿಭಿನ್ನವಾಗಿದ್ದು, ಮುಖ್ಯವಾಗಿ ತೀವ್ರವಾದ ತಂಡಿ ವಾತಾವರಣದಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕುರಿತಂತೆ ಒಂದಷ್ಟು ತಿಳಿದುಕೊಳ್ಳೋಣ.
ಇನ್ಫ್ಲುಯೆನ್ಸಾ ವೈರಸ್’ಗಳಿಂದ ಉಂಟಾಗಿ ಎಲ್ಲೆಡೆ ಕಾಡುತ್ತಿರುವ ಋತುಮಾನದ ಶೀತಜ್ವರ ಅಥವಾ ಚಳಿಗಾಲದ ಶೀತ ಜ್ವರ ಉಲ್ಬಣವಾದರೆ ಉಸಿರಾಟದ ಮೇಲೆ ತೀವ್ರತರವಾದ ಸೋಂಕಿನ ಪರಿಣಾಮವನ್ನು ಬೀರುತ್ತದೆ. ಮಾನ್ಸೂನ್ ಋತು ಹೊರತುಪಡಿಸಿ ನವೆಂಬರ್’ನಿಂದ ಫೆಬ್ರವರಿ ತಿಂಗಳವರೆಗೂ ಭಾರತದಲ್ಲಿ ಈ ಸಮಸ್ಯೆ ಸೌಮ್ಯವಾಗಿ ಸುಮಾರು ಶೇ.70ರಷ್ಟು ಕಾಡುತ್ತದೆ. ಆನಂತರ ವ್ಯಾಪಕವಾಗುತ್ತಾ ಸಾಗುತ್ತದೆ.
ಇನ್ನು, ಫ್ಲೂ ವೈರಸ್’ಗಳು ಕೋವಿಡ್ 19 ವೈರಸ್’ಗಿಂತ ವೇಗವಾಗಿ ಹಾಗೂ ಸುಲಭವಾಗಿ ಹರಡುತ್ತವೆ. ಬಹಳ ಮುಖ್ಯವಾಗಿ ಕೆಮ್ಮು, ಸೀನುವಾಗ ಅಥವಾ ಮಾತನಾಡುವಾಗ ತಯಾರಿಸಿದ ಡಾಪ್ಲರ್’ನಿಂದ ವ್ಯಾಪಕವಾಗಿ ಇದು ಹರಡುತ್ತದೆ.
ಯಾರಲ್ಲಿ ಅತಿ ಹೆಚ್ಚಿನ ಅಪಾಯದ ಸಾಧ್ಯತೆ?
- ಗರ್ಭಿಣಿಯರಲ್ಲಿ
- 5 ವರ್ಷಕ್ಕಿಂತಲೂ ಚಿಕ್ಕ ಮಕ್ಕಳು
- 50 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಕರು
- ಡಯಾಬಿಟಿಸ್, ಕ್ರೋಮಿಯಂ ಶ್ವಾಸಕೋಶದ ಖಾಯಿಲೆ, ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು
- ಕಿಡ್ನಿ ಸಮಸ್ಯೆ, ಎಚ್‌ಐವಿ, ಬೊಜ್ಜು ಹಾಗೂ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು
- ಆರೋಗ್ಯ ಸೇವಾ ಕಾರ್ಯಕರ್ತರು
ಲಕ್ಷಣಗಳು
- ಜ್ವರ
- ಚಳಿಯ ಅನುಭವ
- ಮೂಗು ಸೋರುವಿಕೆ
- ಮೈಕೈ ನೋವು
- ತಲೆ ನೋವು
- ಆಯಾಸ-ಬಳಲಿಕೆ
ಇಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಅಗತ್ಯ
- ಉಸಿರಾಟದ ಸಮಸ್ಯೆ ಕಾಡುತ್ತಿದ್ದಲ್ಲಿ
- ಎದೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು
- ತಲೆ ತಿರುಗುವಿಕೆ, ಮಂಪರು
- ರೋಗಗ್ರಸ್ತವಾಗುವಿಕೆ
- ಮೂತ್ರ ಹೊರಹೋಗುವಿಕೆ ವ್ಯತ್ಯಾಸ
- ಅತಿಯಾದ ಸುಸ್ತು, ಬಳಲಿಕೆ
- ಪದೇ ಪದೇ ಜ್ವರ ಹಾಗೂ ಶೀತ ಕಾಣಿಸಿಕೊಳ್ಳುವುದು
ಮುಂಜಾಗ್ರತಾ ಕ್ರಮಗಳು
- ನಿಮ್ಮನ್ನು ನೀವು ಬೆಚ್ಚಗೆ ಇರಿಸಿಕೊಳ್ಳಿ
- ತಂಪು ಪಾನೀಯ ಹಾಗೂ ತಂಪು ಆಹಾರ ಸೇವನೆ ಬೇಡ
- ಬೆಚ್ಚಗಿನ ನೀರನ್ನು ಸದಾ ಕುಡಿಯಿರಿ
- ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ
- ಪದೇ ಪದೇ ಕೈತೊಳೆಯುತ್ತಿರಿ
- ಕರವಸ್ತ್ರದಿಂದ ಬಾಯಿ, ಮುಖ ಮುಚ್ಚಿಕೊಳ್ಳಿ
- ಫ್ಲೂ ಗೆ ಸಂಬಂಧಿಸಿದ ವ್ಯಾಕ್ಸಿನೇಶನ್ ಪ್ರತಿ ವರ್ಷ ತೆಗೆದುಕೊಳ್ಳಿ
ಮನೆ ಮದ್ದುಗಳು(ಸೌಮ್ಯವಾದ ಇನ್ಫೆಕ್ಷನ್ ಆದಾಗ ಮಾತ್ರ)
- ಅರಿಶಿನದ ಹಾಲು ಹಾಗೂ ತುಪ್ಪವನ್ನು ಸೇವಿಸಿ
- ಗಿಡಮೂಲಿಕೆಗಳ ಮಿಶ್ರಣ ಹಾಗೂ ದಾಲ್ಚಿನ್ನಿ, ಕಪ್ಪು ಮೆಣಸು, ಹಸುವಿನ ತುಪ್ಪ, ಶುಂಠಿ, ತುಳಸಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸಿ
- ಜೇನುತುಪ್ಪ ಹಾಗೂ ಮಸಾಲಾ ಮಿಶ್ರಣ: ಕಪ್ಪು ಮೆಣಸು ಹಾಗೂ ಶುಂಠಿಯ ರಸ ಸೇವಿಸಿ
- ಆಹಾರದಲ್ಲಿ ಬೆಳ್ಳುಳ್ಳಿ ಬಳಸಿ
- ನಿಂಬೆ ಹಣ್ಣಿನೊಂದಿಗೆ ಜೇನು ತುಪ್ಪು ಬಳಸಿ ಸೇವಿಸಿ
- ವಿಟಮಿನ್ ಸಿ ಅಧಿಕ ಹೊಂದಿರುವ ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿ ಹಾಗೂ ನಲ್ಲಿಕಾಯಿ ಸೇವಿಸಿ
- ಹರ್ಬಲ್ ಟೀ ಸೇವಿಸಿ
- ಶುಂಠಿ ಹಾಗೂ ತುಳಸಿ ಬೆರೆಸಿ ಸೇವಿಸಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post