ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿಆರ್’ಪಿಯಿಂದ ನೀರು ಹೊರ ಬಿಟ್ಟಿದ್ದು, ಪರಿಣಾಮವಾಗಿ ಹೊಸ ಸೇತುವೆ ಮತ್ತೆ ಮುಳುಗಿದೆ.
ಕಳೆದ 2-3 ದಿನಗಳಿಂದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪರಿಣಾಮವಾಗಿ ಭದ್ರಾ ಅಣೆಕಟ್ಟೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನದಿಗೆ ನೀರನ್ನು ಹರಿಸಲಾಗಿದ್ದು, ಪರಿಣಾಮವಾಗಿ ಭದ್ರಾ ನದಿ ಅಬ್ಬರಿಸಿ ಹರಿಯುತ್ತಿದೆ.ಅಪಾರ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಿರುವ ಪರಿಣಾಮ ಹೊಸ ಸೇತುವೆ ಮತ್ತೆ ಮುಳುಗಿದ್ದು, ಇಂದು ರಾತ್ರಿ 10 ಗಂಟೆ ವೇಳೆಗೆ ಸೇತುವೆ ಮೇಲೆ ಒಂದು ಅಡಿಗೂ ಹೆಚ್ಚು ನೀರು ಹರಿಯುತ್ತಿತ್ತು. ನಸುಕಿನ ವೇಳೆಗೆ ಪೂರ್ಣ ಮುಳುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇನ್ನು, ಹೊಸ ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಸಂಜೆ ನಂತರ ಹಳೆಯ ಸೇತುವೆ ಮೇಲೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post