ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೋವಿಡ್ ಸಾಂಕ್ರಾಮಿಕದಿಂದ ಎಲ್ಲೆಡೆ ಜನ ಸಾಮಾನ್ಯರು ತೊಂದರೆಗೀಡಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭದ್ರಾವತಿಯ ಭಜರಂಗ ದಳದ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕೋವಿಡ್‌ನಿಂದ ಮೃತರಾದವರ ದೇಹಗಳನ್ನು ಶಿವಮೊಗ್ಗದಿಂದ ಭದ್ರಾವತಿಗೆ ಸಾಗಿಸಲು ಖಾಸಗಿ ಸಂಸ್ಥೆಯ ಆಂಬ್ಯುಲೆನ್ಸ್‌ಗಳು 10000ರೂ. ದಿಂದ 12000ರೂ. ತನಕ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಭಜರಂಗದಳ ಸಂಘಟನೆಯವರು ಅಂತಹ ಮೃತದೇಹಗಳಿಗೆ ವಾಹನ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿಯವರೆಗೆ ಒಟ್ಟು 12 ಮೃತದೇಹಗಳನ್ನು ಸಾಗಿಸಲು ಉಚಿತ ಸೇವೆ ನೀಡಿದ್ದಾರೆ.
ಇದಾಗಲೇ ಹಲವಾರು ಜನರು ಇದರ ಪ್ರಯೋಜನ ಪಡೆದಿದ್ದು, ಅವರ ಈ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಬಜರಂಗ ದಳದ ಜಿಲ್ಲಾ ಪ್ರಮುಖ ಸುನೀಲ್ ಕುಮಾರ್(9483418284), ವಡಿವೇಲು (7019788485), ಶಿವಶಂಕರ್, ಅರಳಿಹಳ್ಳಿ ದೇವರಾಜ್ (9632319555), ಕೃಷ್ಣ, ಶ್ರೀಕಾಂತ್, ಅಜಿತ್, ಕಿರಣ್, ಮಣಿಕಂಠ, ರಮೇಶ್, ಸವಾಯ್ ಸಿಂಗ್, ರಂಗನಾಥ್ ಮತ್ತು ಭರತ್ ಸೇರಿದಂತೆ ಹಲವು ಕಾರ್ಯಕರ್ತರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಲಾಗಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post