ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಎರಡು ದಿನಗಳ ಹಿಂದೆ ಬೀದಿ ನಾಯಿಗಳ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ತಾಲೂಕು ಪಂಚಾಯ್ತಿ ಇಒ ರಮೇಶ್ ಅವರು ಸಾಂತ್ವನ ಹೇಳಿ, ಸಹಾಯ ಧನ ವಿತರಣೆ ಮಾಡಿದ್ದಾರೆ.
ನ.30ರಂದು ನಾಲ್ಕು ವರ್ಷ ಸೈಯ್ಯದ್ ಎಂಬ ಬಾಲಕ ನಾಯಿ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯ್ತಿ ಇಒ, ಸಹಾಯಕ ನಿರ್ದೇಶಕರು(ರಆರ್), ಪಶು ವೈದ್ಯಾಧಿಕಾರಿಗಳು, ಸಹಾಯಕ ನಿರ್ದೇಶಕರು ಬಿಸಿ ಊಟ ಯೋಜನೆ ರವರು ಗ್ರಾಮ ಪಂಚಾಯ್ತಿ ಡೊನಬಘಟ್ಟಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದ್ಯಸರು, ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮಸ್ಥ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಇಒ ರಮೇಶ್, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಕಸ ವಿಂಗಡಿಸಿ ನೀಡುವಂತೆ ತಿಳಿಸಿದರು.
ಗ್ರಾಮದಲ್ಲಿ ಇರುವ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಗ್ರಾಮ ಪಂಚಾಯ್ತಿಯಿಂದ ಕ್ರಮ ಕೈಗೊಳ್ಳಬೇಕು. ನಾಯಿಯಿಂದ ದಾಳಿಗೊಳಗಾದಾಗ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ, ಗ್ರಾಮದಲ್ಲಿ ಇರುವ ಮಾಂಸಾಹಾರಿ ಅಂಗಡಿಗಳಿಗೆ ಸ್ವಚ್ಛತೆ ಕಾಪಾಡಲು ನೋಟೀಸ್ ಜಾರಿಗೊಳಿಸುವಂತೆ ಸೂಚಿಸಿದರು.
Also read: ಕೆಜಿಎಫ್ ಹಾಡು ಬಳಕೆ: ರಾಹುಲ್ ಗಾಂಧಿ ಸೇರಿ ಮೂವರಿಗೆ ಹೈಕೋರ್ಟ್ ನೋಟೀಸ್ ಜಾರಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post