ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಂಬದಾಳು ಹೊಸೂರು ಗ್ರಾಮದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ಸ್ನೇಹಜೀವಿ ಬಳಗದ ವತಿಯಿಂದ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ಜಯಂತಿ ಮತ್ತು ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ಅದ್ದೂರಿಯಿಂದ ಜರುಗಿತು. ಸ್ನೇಹಜೀವಿ ಬಳಗದ ಸತೀಶ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಭಗವಂತನ ಆಶೀರ್ವಾದ ಪಡೆದರು.
ಕೊರೋನಾದಿಂದ ವಿಶ್ವದೆಲ್ಲೆಡೆಯಂತೆ ತತ್ತರಿಸಿರುವ ಭದ್ರಾವತಿಯ ಜನರೂ ಸಹ ಈ ವೈರಸ್’ನಿಂದ ಸಂಪೂರ್ಣ ಮುಕ್ತರಾಗಿ ಸಂಮೃದ್ದಯುತ ಜೀವನ ನಡೆಸುವಂತಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸ್ನೇಹಜೀವಿ ಉಮೇಶ್ ಬಳಗದಿಂದ ಅನ್ನಸಂತರ್ಪಣೆ ಕಾರ್ಯಕ್ರಮವು ಹಮ್ಮಿಕೊಂಡಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.










Discussion about this post