ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ನಗರಸಭೆ ವತಿಯಿಂದ ಸೆ.26ರ ಸೋಮವಾರದಿಂದ ಅಕ್ಟೋಬರ್ 5ರವರೆಗೆ 10 ದಿನಗಳ ದಸರಾ ಉತ್ಸವ ಆಯೋಜಿಸಲಾಗಿದ್ದು, ಸೆ26ರ ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಛೇರಿ ಪ್ರಾಂಗಣದಲ್ಲಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ನೇರವೇರಿಸಿ, ಪುಷ್ಪ ನಮನ ಸಲ್ಲಿಸುವ ಮೂಲಕ ಭದ್ರಾವತಿಯ ನಾಡ ಹಬ್ಬ ದಸರಾ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು.
ಪ್ರತಿ ದಿನ ಸಂಜೆ 6:30ರಿಂದ ಹಳೇನಗರ ಕನಕ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ವಿವರ ಹೀಗಿದೆ.
26 ರಂದು ಮಂಗಳೂರಿನ ಪ್ರಮೋದ ನೃತ್ಯ ತಂಡದಿಂದ ದಸರಾ ನೃತ್ಯ ವೈಭವ
27ರಂದು ಯುವ ದಸರಾ: ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ
28ರಂದು ದಸರಾ ಜಾನಪದ ಉತ್ಸವ: ಜನಪದ ಕಲಾ ಪ್ರಾಕಾರಗಳ ಅಭಿವ್ಯಕ್ತಿ, ವಿವಿಧ ಜನಪದ ಕಲಾ ತಂಡಗಳಿಂದ, ಸಂಚಲನೆ: ತಮಟೆ ಜಗದೀಶ
29ರಂದು ಪರಿಸರ ದಸರಾ: ಬೆಳಿಗ್ಗೆ 7ರಿಂದ 9ರವರೆಗೆ ಭದ್ರಾ ನದಿ ತಟದಲ್ಲಿ ಸ್ವಚ್ಛತೆ ಹೊಸ ಸೇತುವೆ ಎಡ ಮತ್ತು ಬಲ ಬದಿಯ ನದಿ ತಟ, ಇಂದಿರಾ ಕ್ಯಾಂಟೀನ್ ಹತ್ತಿರ.
ಬೆಳಿಗ್ಗೆ 11 ಗಂಟೆಗೆ ಪರಿಸರ ಜನ ಜಾಗೃತಿ ಜಾಥಾ ಮತ್ತು ಕಲಾ ತಂಡಗಳಿಂದ ಪರಿಸರ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ. ಸ್ಥಳ: ಅಂಬೇಡ್ಕರ್ ವೃತ್ತ ದಿಂದ ಆರಂಭಿಸಿ ಹಾಲಪ್ಪ ವೃತ್ತದ ಮೂಲಕ ಹಾದು ರಂಗಪ್ಪ ವೃತ್ತದಲ್ಲಿ ಮುಕ್ತಾಯಗೊಳಿಸುವುದು.
ಸಂಜೆಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮ ಗಾಂಧಿ ಕಂಡ ಕನಸು ಪೌರ ಕಾರ್ಮಿಕರಿಂದ ಸ್ವಚ್ಛತಾ ರೂಪಕ.
ಕಾಲಾಯ ತಸ್ಯೆ ನಮಃ ನಗರಸಭಾ ಸಿಬ್ಬಂದಿಗಳಿಂದ ವಿಡಂಬನಾತ್ಮಕ ರೂಪಕ. ರಚನೆ ಮತ್ತು ನಿರ್ದೇಶನ : ಅಪರಂಜಿ ಶಿವರಾಜ್.
30ರಂದು ಯೋಗ ದಸರಾ: ಬೆಳಿಗ್ಗೆ 7ರಿಂದ 7:30ರವರೆಗೆ ಯೋಗ ನಡಿಗೆ ಮಾಧವಚಾರ್ ವೃತ್ತದಿಂದ ಕನಕ ಮಂಟಪ ಮೈದಾನದವರೆಗೆ. ಬೆಳಿಗ್ಗೆ 7.30ರಿಂದ 8.30ರವರೆಗೆ ಸಾಮೂಹಿಕ ಯೋಗಾಸನ ಕಾರ್ಯಕ್ರಮ. ಸಂಜೆಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ವನಶ್ರೀ ಸಾಗರ ತಂಡದಿಂದ ದಸರಾ ಸಾಂಸ್ಕೃತಿಕ ಯೋಗ ಸಿರಿ ಯೋಗ ನೃತ್ಯ ರೂಪಕಗಳು ಮತ್ತು ವಿವಿಧ ನೃತ್ಯ ಪ್ರಾಕಾರಗಳ ಅನಾವರಣ.
ಅ.1ರಂದು ಮಹಿಳಾ ದಸರಾ: ಬೆಳಿಗ್ಗೆ 9ಗಂಟೆಯಿಂದ 10ರವರೆಗೆ ಮಹಿಳೆಯರಿಂದ ಸವಿ ರುಚಿ (ಸ್ಥಳದಲ್ಲಿಯೇ ಅಗ್ನಿ ರಹಿತ ಆಹಾರ ತಯಾರಿಕಾ ಸ್ಪರ್ಧೆ) ನಗರದ ವಿವಿಧ ಮಹಿಳಾ ಸಂಘ-ಸಂಸ್ಥೆಗಳಿಂದ ಆಯೋಜಿಸುವ ಸ್ಥಳ: ಬಂಟರ ಭವನ, ನ್ಯೂಟೌನ್, ಭದ್ರಾವತಿ,
ನಗರದ ವಿವಿಧ ಮಹಿಳಾ ಸಂಘ-ಸಂಸ್ಥೆಗಳಿಂದ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.
2ರಂದು ರಂಗ ದಸರಾ: ರಂಗ ಗೀತೆಗಳು: ಚಲನಚಿತ್ರ ಹಾಗೂ ಧಾರಾವಾಹಿ ನಟಿ ಸುಪ್ರಿಯ ರಾವ್ ಮತ್ತು ಬಿ. ಚಂದ್ರೇಗೌಡ ತಂಡ. ರಂಗ ಹಾಸ್ಯ ಪ್ರಸಂಗ: ಪ್ರಸ್ತುತಿ: ಕಾಮಿಡಿ ಕಿಲಾಡಿ ಖ್ಯಾತಿ ನಟ ಹೊಂಗಿರಣ ಚಂದ್ರು ಮತ್ತು ದಾಸಪುರಂದರ ಧಾರಾವಾಹಿ ನಟ ಚಂದ್ರ ಶೇಖರ ಶಾಸ್ತ್ರಿ. ರಂಗ ನಾಟಕ: ಹೊಂಗಿರಣ, ಶಿವಮೊಗ್ಗ ತಂಡದಿಂದ ಬೂಟು ಬಂದೂಕುಗಳ ನಡುವೆ ನಿರ್ದೇಶನ: ಡಾ. ಸಾಳ್ವೆಹಳ್ಳಿ ಸತೀಶ್, ರಚನೆ: ಮೈನಾ ಚಂದ್ರು, ಸಮನ್ವಯ: ತಮಟೆ ಜಗದೀಶ್
Also read: ಸದನದಲ್ಲಿ ಕುವೆಂಪು ವಿವಿಯನ್ನು ಶ್ಲಾಘಿಸಿದ ಸಚಿವ ಅಶ್ವತ್ಥನಾರಾಯಣ
3ರಂದು ಮಕ್ಕಳ ದಸರಾ: ಚಿಣ್ಣರ ಗಾಳಿಪಟ ಹಾರಾಟ ಉತ್ಸವ ಬಾನಂಗಳದಲ್ಲಿ ದಸರೆಯ ಚಿತ್ತಾರ, ಪ್ರಸ್ತುತಿ : ಬೆಂಗಳೂರು ನೈಟ್ ಕ್ಲಬ್ ವತಿಯಿಂದ, ಸಂಜೆಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮ ಚಿಣ್ಣರ ಸಾಂಸ್ಕೃತಿಕ ಸಿರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.
4ರಂದು ಆಯುಧ ಪೂಜೆ: ಬೆಳಿಗ್ಗೆ 9.15ರಿಂದ ಕಛೇರಿಯ ವಿವಿಧ ವಾಹನಗಳು ಮತ್ತು ನೀರು ಶುದ್ದೀಕರಣ ಕೇಂದ್ರಗಳಲ್ಲಿ, ಆಯುಧ ಪೂಜೆ ಕಾರ್ಯಕ್ರಮಗಳನ್ನು ನೇರವೇರಿಸಲಾಗುವುದು.
ಸಂಜೆಯ ವೇದಿಕೆ ಕಾರ್ಯಕ್ರಮ ದಸರಾ ಹಾಸ್ಯ – ಲಾಸ್ಯ, ಪ್ರಸ್ತುತಿ: ಖ್ಯಾತ ಗಿಚ್ಚಿ ಗಿಲಿ ಗಿಲಿ ತಂಡ, ಬೆಂಗಳೂರು ರವರಿಂದ ಭಾಗವಹಿಸುವ ಕಲಾವಿದರುಗಳು: ಚಂದ್ರಪ್ರಭ, ಕಾರ್ತಿಕ್, ಜಗ್ಗಪ್ಪ, ರಾಘವೇಂದ್ರ, ಚಿಲ್ಲರ್ ಮಂಜು ಮತ್ತು ಸುಶ್ಮಿತ ರವರ ತಂಡ.
5ರಂದು ಅಪರಾಹ್ನ 3 ಗಂಟೆಯಿಂದ ಅಪ್ಪತಗಗ ಹುತ್ತಾ ಬಸ್ ನಿಲ್ದಾಣದಿಂದ ಅಲಂಕೃತಗೊಂಡ ಶ್ರೀ ಚಾಮುಂಡೇಶ್ವರಿ ದೇವಿ ಹಾಗೂ ನಗರದ ದೇವಾನುದೇವತೆಗಳ ಭವ್ಯ ಮೆರವಣಿಗೆಗೆ ವಿದ್ಯುಕ್ತ ಚಾಲನೆ.
ಸಂಜೆ 6 ಗಂಟೆಗೆ ಬನ್ನಿ ಮುಡಿಯುವ ( ಶಮಿಪೂಜೆ) ಕಾರ್ಯಕ್ರಮ. ತಹಶೀಲ್ದಾರ್ ಪ್ರದೀಪ್ ಕುಮಾರ್ ಬನ್ನಿ ಮುಡಿಯುವ ( ಶಮಿ ಪೂಜೆ) ಕಾರ್ಯಕ್ರಮ ನೆರವೇರಿಸುವರು. ಅಂತಿಮವಾಗಿ ಪಟಾಕಿ ಸಿಡಿಮದ್ದುಗಳನ್ನೊಳಗೊಂಡ ರಾವಣನ ಸಂಹಾರದ ಮೂಲಕ ದಸರಾ ನಾಡ ಉತ್ಸವ ಮುಕ್ತಾಯಗೊಳ್ಳುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post