ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಸ್ತೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ವಯೋವೃದ್ಧ ದಂಪತಿಗಳನ್ನು ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಬಂದು, ಸ್ವತಃ ಎದುರಿಗೆ ನಿಂತು ಚಿಕಿತ್ಸೆ ನೀಡುವ ಮೂಲಕ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಮುಗಿಸಿಕೊಂಡು ಶಾಸಕರು ನಗರಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಲೂಕಿನ ರೆಡ್ಡಿ ಕ್ಯಾಂಪ್ ನಿವಾಸಿಗಳಾದ ಯತಿರಾಜ್ ನಾಯ್ಡು ಮತ್ತು ವಿಜಯಮ್ಮ ಎನ್ನುವವರು ಅಸ್ವಸ್ಥಗೊಂಡು ದಾರಿ ಮಧ್ಯದಲ್ಲಿಯೇ ಕುಸಿದು ಬಿದ್ದಿದ್ದರು. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕರು, ತತಕ್ಷಣ ತಮ್ಮ ಕಾರಿನಲ್ಲಿ ದಂಪತಿಗಳನ್ನು ಕೂರಿಸಿಕೊಂಡು, ಸರ್ಕಾರಿ ಆಸ್ಪತ್ರೆಗೆ ಕರೆ ತಂದರು.
ಆಸ್ಪತ್ರೆಯಲ್ಲಿ ಸ್ವತಃ ತಾವೇ ಎದುರಿಗೆ ನಿಂತುಕೊಂಡು ವೈದ್ಯರೊಂದಿಗೆ ಮಾತನಾಡಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಅಸ್ವಸ್ಥಗೊಂಡಿದ್ದವರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ ಶಾಸಕ ಸಂಗಮೇಶ್ವರ ಅವರ ಈ ಮಾನವೀಯ ಕಳಕಳಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post