ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದಲ್ಲಿ ರಥೋತ್ಸವವು ವಿಜೃಂಭಣೆಯಿಂದ ಭಾನುವಾರ ನೆರವೇರಿತು. ದೇವಾಲಯ ಸಮಿತಿ ಅಧ್ಯಕ್ಷ ಶಿವಾಜಿರಾವ್ ಗಾಯಕ್ವಾಡ್ ನೇತೃತ್ವದಲ್ಲಿ ನಡೆಯಿತು.
ಗ್ರಾಮದ ಮುಖಂಡರಾದ ವಿಠಲರಾವ್ ಗಾಯಕ್ವಾಡ್, ನಾಗರಾಜ್ ರಾವ್ ಗಾಯಕ್ವಾಡ್, ಲಕ್ಷ್ಮಣರಾವ್ ಗಾಯಕ್ವಾಡ್, ಆರ್. ರಘುನಾಥರಾವ್ ಗಾಯಕ್ವಾಡ್, ಉಮೇಂದ್ರರಾವ್ ಗಾಯಕ್ವಾಡ್, ಜಗನ್ನಾಥರಾವ್ ಗಾಯಕ್ವಾಡ್, ಯುವ ಮುಖಂಡ ಪುನೀತ್, ಚಂದ್ರಶೇಖರ್, ನಂದಿನಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಾಧವರಾವ್ ಗಾಯಕ್ವಾಡ್, ಕೋಮಾರನ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post