ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೆನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಉಡುಪಿ ಪೇಜಾವರ ಅಧೋಕ್ಷಜ ಮಠ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಎರಡನೇ ಆರಾಧನೆ ಮಹೋತ್ಸವ ಜರಗಿತು.
ಈ ಕಾರ್ಯಕ್ರಮದಲ್ಲಿ ವೇದ ಬ್ರಹ್ಮ ರಂಗನಾಥ ಶರ್ಮಾ ಅವರು ಹಾಗೂ ಸಹಾಯಕ ಅರ್ಚಕರಾದ ಶ್ರೀನಿವಾಸ್ ವೇದಘೋಷ ದೊಂದಿಗೆ ಕಾರ್ಯಕ್ರಮ ಚಾಲನೆ ಕೊಟ್ಟರು. ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ಹಳೆನಗರದ ರಾಘವೇಂದ್ರಸ್ವಾಮಿ ಮಠದ ತನಕ ವಿಜ್ರಂಭಣೆಯಿಂದ ಮೆರವಣಿಗೆ ನಡೆಯಿತು.
ಎಲ್ಲಾ ಭಜನಾ ಮಂಡಳಿಗಳು ಹರಿದಾಸ ಭಜನಾ ಮಂಡಳಿ, ಕರಾವಳಿ ವಿಪ್ರ ಬಳಗ ಬಳಗ ಭಜನಾ ಮಂಡಳಿ, ಹರಿಪ್ರಿಯಾ ಭಜನಾ ಮಂಡಳಿ, ಜ್ಞಾನವಾಹಿನಿ ಭಜನಾ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದರು.
ರಾಘವೇಂದ್ರ ಅಡಿಗೆ, ಪ್ರಹಲ್ಲಾದ್ ಉದಯಕುಮಾರ್ ಅನಿಲ ಹಾಗೂ ಪೇಜಾವರ ಶ್ರೀಗಳ ಶಿಷ್ಯರಾದ ಪ್ರಮೋದ್ ಕುಮಾರ್, ಶ್ರೀನಿಧಿ ಪವನ್ ಕುಮಾರ್, ಗುರುರಾಜಸೇವಾ ಸಮಿತಿ ಅಧ್ಯಕ್ಷರಾದ ಮುರಳಿಧರ್ ತಂತ್ರಿ, ನಿರಂಜನ್ ಆಚಾರ್, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ ತಂತ್ರಿ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಪ್ರಧಾನ ಅರ್ಚಕರಾದ ಸತ್ಯನಾರಾಯಣ, ಜಯತೀರ್ಥ, ಶ್ರೀಪತಿ, ಮಧು, ಗುರುರಾಜ್ ಚೌತಾಯಿ, ವಾಸುದೇವಮೂರ್ತಿ, ನಾಗರಾಜ್ ಉಪಾಧ್ಯಾಯ, ರಂಗಣ್ಣ, ಗಿರಿ, ಕೃಷ್ಣಮೂರ್ತಿ ಎಲ್ಲಾ ಭಕ್ತರ ಸಹಕಾರದಿಂದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post