ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣೆಗೆ ನಗರದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಜಿಲ್ಲಾ ಮಟ್ಟದ ನಾಯಕರುಗಳು ಭಾಗಿಯಾಗಿ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ.
ವಾರ್ಡ್ ನಂ 21ರ ಅಭ್ಯರ್ಥಿ ಅನುಷಾ ಪರವಾಗಿ ಕ್ರಿಶ್ಚಿಯನ್ ಮತದಾರರ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅನುಷಾ ಅವರು, ವಾರ್ಡ್’ನ ಅಭಿವೃದ್ಧಿಗಾಗಿ ತಮಗೆ ಮತ ನೀಡುವಂತೆ ಸೆರಗೊಡ್ಡಿ ಯಾಚಿಸಿದರು.

ಕೆ.ವಿ. ಅಣ್ಣಪ್ಪ. ಎನ್.ಜೆ. ರಾಜಶೇಖರ್, ಎನ್.ಡಿ. ಸತೀಶ್, ಇ.ಟಿ. ಬೆನ್ನಿ, ಜಾನಪಲ್, ನಂದಕುಮಾರ್, ಪ್ರಭುದಾಸ್, ಕ್ಲೇಮೆಂಟ್ ರಾಯನ್, ವಿನ್ಸೆಟ್ ರೋಡ್ರಿಗಸ್ ಗಿರೀಶ್, ಅಶೋಕ್ ಸಿಂಧೆ, ಮಣಿ, ರವೀಂದ್ರ, ಹಾಗೂ ಕಾರ್ಯಕರ್ತರು ಈ ಬಾರಿ ಬಿಜೆಪಿ ಪಕ್ಷಕ್ಕೆ ಅವಕಾಶ ನೀಡುವಂತೆ, ಭದ್ರಾವತಿ ನಗರದ ಸಮಗ್ರ ಅಭಿವೃದ್ಧಿಗೆ ಬೆಂಬಲಿಸುವಂತೆ ಮತದಾರರಲ್ಲಿ ಕೋರಿದರು.
ಬಿಜೆಪಿ ಅಭ್ಯರ್ಥಿ ನಕುಲ್ ಜೆ ರೇವಣಕರ್ ಪರವಾಗಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರಾದ ದತ್ತಾತ್ರಿ ಮತಯಾಚನೆ ಮಾಡಿದರು.
ಪ್ರಮುಖವಾಗಿ ಭದ್ರಾವತಿಯ ಜೈನ್ ಸಮುದಾಯದ ಮುಖಂಡರನ್ನು ಭೇಟಿ ಮಾಡಲಾಯಿತು ಹಾಗೂ ಭದ್ರಾವತಿ ನಗರದ ಸಮಗ್ರ ಅಭಿವೃದ್ಧಿಗೆ ಬಿಜೆಪಿವನ್ನು ಬೆಂಬಲಿಸುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಅಭ್ಯರ್ಥಿ ನಕುಲ್ ಜೆ. ರೇವಣಕರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
12ನೆಯ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕೆ. ಸುದೀಪ್‌ಕುಮಾರ್ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಸುದೀಪ್ ಕುಮಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು, ಅಲ್ಲದೆ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಹಾಗೂ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
12ನೆಯ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ ಸ್ಪರ್ಧಿಸಿದ್ದು, ಇವರ ಸಹ ಬುಧವಾರ ಬೆಳಿಗ್ಗೆ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಪ್ರಭಾಕರ್ ತಾಲೂಕು ದೇವಾಂಗ ಸಮಾಜ ಹಾಗೂ ಶ್ರೀ ಬನಶಂಕರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಆರಂಭದಿಂದಲೂ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post