ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೆ ನಗರದ ವಿಪ್ರ ಬಾಂಧವರಿಂದ ವಿಶೇಷ ರೀತಿಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಆಚರಿಸಲಾಯಿತು.
ಸ್ವಾಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಹೋರಾಟಗಾರ ಭಾವಚಿತ್ರಗಳನ್ನು ಬಡಾವಣೆಯ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಿ, ಬಾವುಟಕ್ಕೆ ಪುಷ್ಪ ಅರ್ಪಿಸುವುದರ ಮೂಲಕ ನಮನ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಸುನಂದಮ್ಮ ಸಿ. ಕೆ. ರಾಮರಾವ್, ರಮಾಕಾಂತ್, ನರಸಿಂಹಾಚಾರ್, ಗೋಪಾಲಾಚಾರ್, ದೇಶಪಾಂಡೆ ಜನಾರ್ಧನ್ ಹೆಂಗಾರ್, ಸುಮಾ, ಪರಿಮಳ, ನಾಗರಾಜ್, ಹೇಮಾ, ಟಿ. ಆರ್. ರಘುರಾಮ್, ಸುಧೀಂದ್ರ ಇತರರು ಭಾಗವಹಿಸಿದ್ದರು.
ಸೀಗೆಬಾಗಿ, ಹೊಸಮನೆ, ಬೊಮ್ಮನಕಟ್ಟೆ ಆಟೋ ಚಾಲಕರ ನಿಲ್ದಾಣದಲ್ಲಿ ಭದ್ರಾವತಿ ಯುವನಾಯಕ ಬಿ. ಎಸ್. ಗಣೇಶ್ ಧ್ವಜಾರೋಹಣ ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post