ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅ.31ರಿಂದ ನ.6ರವರೆಗೂ ವಿಐಎಸ್’ಎಲ್’ನಲ್ಲಿ ಆಯೋಜಿಸಲಾಗಿದ್ದ ಜಾಗೃತಿ ತಿಳುವಳಿಕೆ ಸಪ್ತಾಹ ಸಂಪನ್ನಗೊಂಡಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಿಲೆನ್ಸ್ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ, ರಾಷ್ಟçಪತಿ, ಉಪರಾಷ್ಟçಪತಿ, ಪ್ರಧಾನಮಂತ್ರಿ ಮತ್ತು ಮುಖ್ಯ ವಿಜಿಲೆನ್ಸ್ ಕಮಿಷನರ್ ಅವರ ಸಂದೇಶಗಳನ್ನು ಓದುವ ಮೂಲಕ ನೆರವೇರಿಸಲಾಯಿತು.
ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್, ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಅಧ್ಯಕ್ಷ ಸುಗಾಲಿ ಲೋಕನಾಥ್, ಉಪಾಧ್ಯಕ್ಷರಾದ ಬಿ.ಸಿ. ಶೈಲಶ್ರೀ ಅವರುಗಳು ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಸರ್.ಎಂ.ವಿಶ್ವೇಶ್ವರಾಯನವರಿಗೆ ಪುಷ್ಪನಮನ ಸಲ್ಲಿಸಿದರು.
ಜಾಗೃತ ಜಾಥವನ್ನು ನಡೆಸಲಾಯಿತು. ಕಾರ್ಯಪಾಲಕ ನಿರ್ದೇಶಕರಾದ ತ್ರಿವೇಣಿ ಪ್ರಾರ್ಥಿಸಿ, ಸಬೀಕರನ್ನು ಉದ್ದೇಶಿಸಿ ಮಾತನಾಡಿದರು. ಮಹಾಪ್ರಬಂಧಕರು (ವಿಜಿಲೆನ್ಸ್) ರಘುನಾಥ. ಬಿ. ಅಷ್ಟಪುತ್ರೆ ಸ್ವಾಗತಿಸಿದರು. ಆನಂತರ ಮಾತನಾಡಿ, ಸಪ್ತಾಹದ ಮಹತ್ವ ಹಾಗೂ ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಜಾಗರೂಕರಾಗಿರಲು ತೆಗೆದುಕೊಳ್ಳಬೇಕಾದ ಕಾಳಜಿಯ ಬಗ್ಗೆ ತಿಳಿಸಿದರು. ಸಹಾಯಕ ಮಹಾಪ್ರಬಂಧಕರು (ವಿಜಿಲೆನ್ಸ್) ಎಲ್. ಕುಥಲನಾಥ್ ನಿರೂಪಿಸಿ, ವಿಜಲೆನ್ಸ ಇಲಾಖೆಯ ಕೇದಾರನಾಥ್ ಧನ್ಯವಾದ ಅರ್ಪಿಸಿದರು.
ಜಾಗೃತಾ ತಿಳುವಳಿಕೆ ಸಪ್ತಾಹದ ಭಾಗವಾಗಿ, ವಿಐಎಸ್‌ಎಲ್‌ನಲ್ಲಿ 25 ಮಾರಾಟಗಾರರನ್ನು ಒಳಗೊಂಡ ಮಾರಾಟಗಾರರ ಸಭೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಅವರ ಕುಂದುಕೊರತೆಗಳನ್ನು ಆಲಿಸಲಾಯಿತು. ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ಸಲಹೆಗಳನ್ನು ಸ್ವೀಕರಿಸಲಾಯಿತು ಮತ್ತು ಸಮಗ್ರತೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾಷಣ, ರಸಪ್ರಶ್ನೆ, ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಐಎಸ್‌ಎಲ್‌ನ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರಿಗಾಗಿ ಪೋಸ್ಟರ್ ವಿನ್ಯಾಸ, ಪ್ರಬಂಧ ಬರಹ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶುಚಿತ್ವದ ವಿಶೇಷ ಅಭಿಯಾನದ ಅಂಗವಾಗಿ ವಿವಿಧ ವಿಭಾಗಗಳಾದ್ಯಂತ ಹೌಸ್ ಕೀಪಿಂಗ್ ಸ್ಪರ್ಧೆ ಅಭಿಯಾನವನ್ನು ಆಯೋಜಿಸಲಾಗಿತ್ತು. ಭದ್ರಾವತಿಯ ವಿವಿಧ ಶಾಲಾ-ಕಾಲೇಜುಗಳ ಸುಮಾರು 250 ವಿದ್ಯಾರ್ಥಿಗಳು ಮತ್ತು ವಿಐಎಸ್‌ಎಲ್‌ನ ಸುಮಾರು 100 ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿದ್ದರು. ವರ್ಣರಂಜಿತ ಫಲಕಗಳನ್ನು ಅನನ್ಯ ಹೈಸ್ಕೂಲ್ ಮತ್ತು ಎಸ್.ಎ.ವಿ ಹೈಸ್ಕೂಲ್‌ನ ಎಥಿಕ್ಸ್ ಕ್ಲಬ್ ವಿದ್ಯಾರ್ಥಿಗಳು ಸಿದ್ದಪಡಿಸಿದ್ದರು.
ಶ್ರೀ ಶಾರದಾ ಮಂದಿರದಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಐಎಸ್‌ಎಲ್‌ನ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರಿಂದ ಭ್ರಷ್ಟಾಚಾರದ ದುಷ್ಟರಿಣಾಮಗಳು ವಿಷಯಾಧಾರಿತ 2 ಕಿರು ನಾಟಕಗಳನ್ನು ಪ್ರದರ್ಶಿಸಲಾಯಿತು.
ಸಪ್ತಾಹದಲ್ಲಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿರಿಯ ಅಧಿಕಾರಿಗಳು, ನೌಕರರು ಮತ್ತು ವಿಐಎಸ್‌ಎಲ್‌ನ ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಹಿರಿಯ ಪ್ರಬಂಧಕರು (ಹಣಕಾಸು) ಉನ್ನೀಕೃಷ್ಣನ್ ಸುಶ್ರಾವ್ಯವಾಗಿ ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post