ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೋವಿಡ್19 ಸೋಂಕಿತರಿಗೆ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರೊಟ್ಟಿಗೆ ಭದ್ರಾವತಿಯ ವಿಐಎಸ್’ಎಲ್ ಆಸ್ಪತ್ರೆಯಲ್ಲೂ ಸಹ ಚಿಕಿತ್ಸೆ ನೀಡಲು ಸಿದ್ದತೆ ನಡೆದಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿದ್ದು, ಮೆಗ್ಗಾನ್‌ನಲ್ಲಿ ಪ್ರಸ್ತುತ 150 ಹಾಸಿಗೆ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಗಾಜನೂರಿನಲ್ಲಿ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ 190 ಬೆಡ್ ಹಾಗೂ ಭದ್ರಾವತಿ ವಿಎಸ್‌ಐಎಲ್‌ನಲ್ಲಿ 50 ಬೆಡ್ ಸೌಲಭ್ಯ ಸಜ್ಜುಗೊಳಿಸಲಾಗುತ್ತಿದೆ. 23 ಕೋವಿಡ್ ಕೇರ್ ಸೆಂಟರ್‌ಗಳನ್ನು ಗುರುತಿಸಲಾಗಿದೆ. ರೋಗ ಲಕ್ಷಣಗಳಿಲ್ಲದ ಕರೋನಾ ಪಾಸಿಟಿವ್ ವ್ಯಕ್ತಿಗಳಿಗಾಗಿ ಎರಡು ತಾಲೂಕುಗಳಲ್ಲಿ ಮೆಗ್ಗಾನ್ ಆಸ್ಪತ್ರೆಯ ಸ್ಯಾಟಲೈಟ್ ಕ್ಯಾಂಪಸ್ ಸಜ್ಜುಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 199 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 870 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿರುವ ಎರಡು ಪ್ರಯೋಗಾಲಯಗಳಲ್ಲಿ 24 ರಿಂದ 32 ಗಂಟೆಯ ಒಳಗಾಗಿ ವರದಿ ಬರುತ್ತಿದೆ. ಪ್ರತಿ ದಿನ ಸರಾಸರಿ 450 ಸ್ಯಾಂಪಲ್ ಪರೀಕ್ಷೆ ನಡೆಸಲಾಗುತ್ತಿದೆ. ಮನೆ ಕ್ವಾರೆಂಟೈನ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಎಫ್‌ಐಆರ್ ದಾಖಲಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಭಾನುವಾರ ಆವಶ್ಯಕ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಪ್ರತಿದಿನ ರಾತ್ರಿ 8 ಗಂಟೆಯಿಂದ ಕರ್ಫ್ಯೂ ಕಟ್ಟುನಿಟ್ಟಿನಿಂದ ಜಾರಿಗೊಳಿಸಲಾಗುವುದು ಎಂದರು.
Get In Touch With Us info@kalpa.news Whatsapp: 9481252093






Discussion about this post