ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಲೇಖಕ ಮಲ್ಲೇಶ್ ಎಂಬ ವ್ಯಕ್ತಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರ ಕೂಡಲೇ ಆತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ಬ್ರಾಹ್ಮಣ ಸಂಘಟನೆ ಆಗ್ರಹಿಸಿದೆ.
ಮೈಸೂರಿನ ರಂಗಮಂದಿರದಲ್ಲಿ ನ.15ರ ಮಂಗಳವಾರ ಸಂಜೆ ನಡೆದ ಸಿದ್ಧರಾಮಯ್ಯ 75 ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ರಾಹ್ಮಣರನ್ನು ನಂಬಬೇಡಿ ಇದರಿಂದ ದೇಶ ನಾಶವಾಗುತ್ತದೆ ಎಂದು ಮಾತನಾಡಿರುವುದು ಖಂಡನೀಯ ವಿಚಾರವಾಗಿದ್ದು, ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಈ ಹೇಳಿಕೆಯನ್ನು ವಿರೋಧಿಸದೆ ಇರುವುದು ಶೋಚನೀಯ ಸಂಗತಿಯಾಗಿದೆ ಎಂದು ಸಂಘಟನೆ ವಿಷಾದ ವ್ಯಕ್ತಪಡಿಸಿದೆ.
ಬ್ರಾಹ್ಮಣ ಸಮುದಾಯದ ಮೇಲೆ ಅನೇಕ ರೀತಿಯ ದಬ್ಬಾಳಿಕೆ ನಡೆಸುತ್ತಿದ್ದು, ನಮ್ಮ ಸಂಪ್ರದಾಯದ ಮೇಲೆ ಅವಹೇಳನ ನಿರಂತರವಾಗಿ ಮುಂದುವರೆದಿದೆ. ಬ್ರಾಹ್ಮಣ ಸಮಾಜವು ಶತಮಾನಗಳಿಂದ ಸರ್ವೇಜನ ಸುಖಿನೋಭವಂತು ಎನ್ನುವ ಆಶಯ ಹೊಂದಿದೆ. ಸಮಾಜದ ಎಲ್ಲ ವರ್ಗದವರೊಂದಿಗೆ ಸಹಬಾಳ್ವೆ ನಡೆಸುತ್ತ ರಾಷ್ಟ್ರದ ಏಳಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದೆ. ಅಸಂಬಂಧ ಹೇಳಿಕೆಗಳನ್ನು ನೀಡುವ ಸಮಾಜದ ತೇಜೋವಧೆಗೆ ಮುಂದಾಗಿರುವ ಲೇಖಕ ಮಲ್ಲೇಶ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಘಟನೆ ಮನವಿ ಮಾಡಿದೆ.
ಪ್ರತಿಭಟನೆಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಮ್.ಎಸ್. ಜನಾರ್ಧನ ಅಯ್ಯಂಗಾರ್, ಗೌರವಾಧ್ಯಕ್ಷ ಡಾ. ಹರೀಶ್, ಉಪಾಧ್ಯಕ್ಷರಾದ ನೀಲಕಂಠಜೋಯ್ಸ್, ಜಿ. ರಮಕಾಂತ್, ಖಜಾಂಚಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ. ರಮೇಶ್, ಕಾರ್ಯದರ್ಶಿ ಇಂದ್ರಸೇನ ರಾವ್, ಕೇಶವಮೂರ್ತಿ, ರಾಘವೇಂದ್ರ, ಸಂಚಾಲಕ ಪ್ರಭಾಕರ್ ಜೋಯ್ಸ್, ರವಿ ತಂತ್ರಿ, ಲಕ್ಷ್ಮಿ ರವಿ ತಂತ್ರಿ, ಪರಿಮಳ ನಾಗರಾಜ್, ಶೋಭಾ ಶ್ರೀಧರ್, ಕರಾವಳಿ ವಿಪ್ರ ಬಳಗದ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಇನ್ನಿತರರಿದ್ದರು.ಪ್ರತಿಭಟನೆಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಮ್.ಎಸ್. ಜನಾರ್ಧನ ಅಯ್ಯಂಗಾರ್, ಗೌರವಾಧ್ಯಕ್ಷ ಡಾ. ಹರೀಶ್, ಉಪಾಧ್ಯಕ್ಷರಾದ ನೀಲಕಂಠಜೋಯ್ಸ್, ಜಿ. ರಮಕಾಂತ್, ಖಜಾಂಚಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ. ರಮೇಶ್, ಕಾರ್ಯದರ್ಶಿ ಇಂದ್ರಸೇನ ರಾವ್, ಕೇಶವಮೂರ್ತಿ, ರಾಘವೇಂದ್ರ, ಸಂಚಾಲಕ ಪ್ರಭಾಕರ್ ಜೋಯ್ಸ್, ರವಿ ತಂತ್ರಿ, ಲಕ್ಷ್ಮಿ ರವಿ ತಂತ್ರಿ, ಪರಿಮಳ ನಾಗರಾಜ್, ಶೋಭಾ ಶ್ರೀಧರ್, ಕರಾವಳಿ ವಿಪ್ರ ಬಳಗದ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post