ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ನಗರದ ಹೊಸಮನೆ ಆನಂದ ಮಾರ್ಗ ಶಾಲೆಗೆ ಮಕ್ಕಳ ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸಲಾಯಿತು.
ನಗರದಲ್ಲಿ ಹಲವಾರು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರತರಾಗಿರುವ ಲಯನ್ಸ್ ಮತ್ತು ಲಿಯೋ ಕ್ಲಬ್‌ಗಳು, ಈ ಬಾರಿ ಆನಂದ ಮಾರ್ಗ ಶಾಲೆಯನ್ನು ಗುರುತಿಸಿ ಮಕ್ಕಳ ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸಿದರು.
ಜಿಲ್ಲಾ ಗೌರ್‍ನರ್ ಎಚ್. ವಿಶ್ವನಾಥಶೆಟ್ಟಿ, ಮಾಜಿ ಗೌರ್‍ನರ್ ಬಿ. ದಿವಾಕರಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್ ಮಹೇಶ್‌ಕುಮಾರ್, ಕಾರ್ಯದರ್ಶಿ ಶಂಕರ್ ಮೂರ್ತಿ, ಖಜಾಂಚಿ ವಿ. ವಿನೋದ್ ಗಿರಿ, ವಲಯ ಅಧ್ಯಕ್ಷ ಹೆಬ್ಬಂಡಿ ನಾಗರಾಜ್, ಮಾಜಿ ಅಧ್ಯಕ್ಷ ಎಲ್. ದೇವರಾಜ್, ದಾನಿಗಳಾದ ಶಿವರುದ್ರಪ್ಪ, ರಾಜೇಶ್, ಸುಶಿತ್‌ಶೆಟ್ಟಿ, ಸುಂದರ್ ಬಾಬು ಹಾಗು ಲಿಯೋ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು, ಆನಂದ ಮಾರ್ಗ ಶಾಲೆಯ ಮಾತಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post