ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೂಡ್ಲಿಗೆರೆ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಗ್ರಾಮ ಸ್ವರಾಜ್ಯ ಯೋಜನೆಯಡಿ 9 ಲಕ್ಷ ರೂ.ಗಳ ವಿಶೇಷ ಅನುದಾನದಲ್ಲಿ ಕಸ ವಿಲೇವಾರಿ ಘಟಕ (ವೈಜ್ಞಾನಿಕ ಪದ್ದತಿಯಲ್ಲಿ ಕಸ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಂಗಡಿಸಿ ಕಾಂಪೋಸ್ಟ್ ತಯಾರಿಕೆ) ಕಟ್ಟಡ ಕಾಮಗಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಲಕ್ ಬಿ ವೀರಪ್ಪನ್ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಕುಬೇರ ನಾಯ್ಕ, ಸದಸ್ಯರಾದ ಆರ್.ಎನ್. ರುದ್ರೇಶ, ಜಯಣ್ಣ, ವಿಶ್ವನಾಥ, ನಾಗರಾಜ್, ಸ್ವಾಮಿನಾಥನ್, ಭಾಗ್ಯ, ನೀಲಬಾಯಿ, ಪಾರ್ವತಿಬಾಯಿ, ಸಿದ್ದಮ್ಮ, ಉಮಾದೇವಿ, ಇಂಜಿನಿಯರ್ ಶಿವಕುಮಾರ್, ಕಂಟ್ರಾಕ್ಟರ್ ರುದ್ರಮುನಿ, ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post