ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅಂಗವಿಕಲರು ಸಾಮಾನ್ಯರಂತೆ ಜೀವನ ನಡೆಸಬೇಕೆನ್ನುವ ಯೋಚನೆಯಿಂದ ಸರ್ಕಾರದ ವತಿಯಿಂದ ಅರ್ಹರಿಗೆ ಸಾಧನಗಳನ್ನು ವಿತರಿಸುತ್ತಿರುವುದಾಗಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಶಾಸಕ ಬಿ.ಕೆ. ಸಂಗಮೇಶ್ವರ #B K Sangameshwar ತಿಳಿಸಿದರು.
ಶಾಸಕರ ಗೃಹ ಕಛೇರಿಯಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಜಿಲ್ಲಾ ವಿಕಲಚೇತನ ಕಲ್ಯಾಣ ಇಲಾಖೆ ವತಿಯಿಂದ ಶ್ರವಣ ಸಾಧನ, ಊರುಕೋಲು, ಅಂಗವಿಕಲಗಾಲಿಕುರ್ಚಿ, ಬೈಸಿಕಲ್ ಮತ್ತು ಮಹಿಳೆಯರಿಗೆ ಹೊಲಿಗೆಯಂತ್ರ ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರದ ಪ್ರತಿಯೊಂದು ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ಯೋಚನೆ ತಮ್ಮದಾಗಿದ್ದು, ಈ ನಿಟ್ಟಿನಲ್ಲಿ ಮುಂದುವರೆದು ಹಿಂದುಳಿದ ವರ್ಗಗಳ ನಿಗಮ ಮತ್ತು ವಿಕಲಚೇತನ ಇಲಾಖೆಗಳ ಮೂಲಕ ಅರ್ಹರಿಗೆ ಸಾಧನಗಳನ್ನು ವಿತರಿಸುತ್ತಿದ್ದೇವೆ. ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬ ಉದ್ದೇಶದಿಂದ ತಮ್ಮ ಜೀವನ ಸಾಗಿಸಲು ಸ್ವಂತಕಾಲ ಮೇಲೆ ನಿಲ್ಲಬೇಕು ಎಂಬ ಮನೋಭಾವವುಳ್ಳವರಿಗೆ ವಿತರಿಸುವ ಮೂಲಕ ರಾಜ್ಯಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದಾಗಿ ತಿಳಿಸಿದರು.
Also read: ಹಾಸನಾಂಬೆ ಉತ್ಸವಕ್ಕೆ ಕ್ಷಣಗಣನೆ | ಇಂದಿನಿಂದ ನವೆಂಬರ್ 3ರವರೆಗೆಗೆ ಭಕ್ತರಿಗೆ ದರ್ಶನ
ಸರ್ಕಾರಗಳು ಯೋಜನೆಗಳನ್ನು ರೂಪಿಸುವುದೇ ಇಂತಹವರಿಗೊಸ್ಕರ, ಅರ್ಹ ಅಂಗವಿಕಲರನ್ನು ಹಿಂದುಳಿದವರನ್ನು ಅಯ್ಕೆಮಾಡಿ ವಿತರಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಹಾ ಸರ್ಕಾರದ ಸಹಕಾರದಿಂದ ಅರ್ಹರಿಗೆ ಸಹಕರಿಸುವುದಾಗಿ ತಿಳಿಸಿದರು.
ಜನಸೇವೆಯೆ ಜನಾರ್ಧಾನ ಸೇವೆ ಎಂಬುದನ್ನು ನಂಬಿದ್ದೇನೆ. ಒಟ್ಟಾರೆ ಜನ ನೆಮ್ಮದಿಯಿಂದ ಬದುಕಬೇಕು ಎಂಬುದು ತಮ್ಮ ಹಂಬಲ ತಾವು ಸಾರ್ವಜನಿಕ ಸೇವೆಗೆ ಸದಾಸಿದ್ಧವಿದ್ದೇನೆ ಎಂದರು.
ಇಂತಹ ಪ್ರತಿಯೊಂದು ಯೋಜನೆಗಳ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಾಗಿ ಹಾಗೂ ತೊಂದರೆಯುಂಟಾದಲ್ಲಿ ತಮ್ಮ ಕುಟುಂಬದವರೊಬ್ಬರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಬಿಕೆ. ಮೋಹನ್, ನಗರಸಭಾ ಸದಸ್ಯರಾದ ಮಂಜುನಾಥ್, ಸಯ್ಯದ್ ರೀಯಾಜ್, ಮುಖಂಡರಾದ ಬಿಎಸ್. ಬಸವೇಶ್, ಬಿಎಸ್.ಗಣೇಶ್, ನಾಗರಾಜ್ ಅಂತರಗಂಗೆ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಪ್ರ.1, 2ಎ, 3ಎ ಮತ್ತು 3ಬಿ ವರ್ಗಗಳ ಜಿಲ್ಲಾ ವ್ಯವಸ್ಥಾಪಕಿ ಕೆ. ಮಹಾದೇವಿ, ಜಿಲ್ಲಾ ವಿಕಲಚೇತನ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್, ಸೇರಿದಂತೆ ಇತರರು ಇದ್ದರು.
36 ಹೊಲಿಗೆ ಯಂತ್ರಗಳು, 20 ಶ್ರವಣ ಸಾಧನಗಳು, 10 ಊರುಕೋಲುಗಳು, 5 ಅಂಗವಿಕಲ ಗಾಲಿಕುರ್ಚಿಗಳು ಮತ್ತು 5 ಬೈಸಿಕಲ್ ಗಳನ್ನು ವಿತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post