ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿನ ಲೋಪದೋಷಗಳನ್ನ ಪಟ್ಟಿ ಮಾಡಿ ಪರ್ಮಿಟ್ ರಿನಿವಲ್‌ಗೆ ಕಂಡೀಷನ್ ವಿಧಿಸಿದ್ದ ಡಿಜಿಸಿಎ #Directorate General of Civil Aviation ಅಧಿಕಾರಿಗಳು ಇದೀಗ ಮುಂದಿನ ವರ್ಷದವರೆಗೂ ಪರ್ಮಿಟ್ ರಿನಿವಲ್‌ಗೆ ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣದ #Shivamogga Airport ಮಟ್ಟಿಗೆ ಬೆಟ್ಟದಂತಿದ್ದ ಸಮಸ್ಯೆಯೊಂದು ಬಗೆಹರಿದಿದೆ ಎನ್ನುವುದು ಸಮಾಧಾನದ ಸಂಗತಿಯಾಗಿದೆ.
Also read: ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು: ಶಾಸಕ ಬಿ.ಕೆ. ಸಂಗಮೇಶ್ವರ್
ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿನ ಲೋಪದೋಷಗಳನ್ನ ಪಟ್ಟಿ ಮಾಡಿದ್ದ DGCAನ ಅಧಿಕಾರಿಗಳು ಪರ್ಮಿಟ್ ರಿನಿವಲ್‌ಗೆ ಕಂಡೀಷನ್ ವಿಧಿಸಿದ್ದರು. ಅಲ್ಲದೆ ತಾತ್ಕಾಲಿಕವಾಗಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಟ್ಟಿಗೆ ತಿಂಗಳ ಅನುಮತಿ ನೀಡಿದ್ದರು.
ನಿನ್ನೆದಿನ ಲೈಸೆನ್ಸ್ ರಿನಿವಲ್ ಮಾಡಲಾಗಿದ್ದು ಮುಂದಿನ ವರ್ಷದ ಅಕ್ಟೋಬರ್ 23 ವರೆಗೂ ಲೈಸೆನ್ಸ್ ಅವಧಿ ಜಾರಿಯಲ್ಲಿರಲಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post