ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರಸಭೆ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿಯಲ್ಲಿ ಸ್ವಾಗತ್ ಯುವಕರ ಸಂಘದ 25ನೇ ವರ್ಷದ ವಿನಾಯಕ ಮಹೋತ್ಸವ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಶಾಸಕ ಬಿ. ಕೆ. ಸಂಗಮೇಶ್ವರ್ ಪಾಲ್ಗೊಂಡಿದ್ದರು.
ಈ ಬಾರಿ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಭವ್ಯವಾದ ಪ್ರತಿಷ್ಠಾಪನಾ ವೇದಿಕೆ ನಿರ್ಮಿಸುವ ಮೂಲಕ ಅದ್ದೂರಿಯಾಗಿ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಗುರುವಾರ ಸತ್ಯನಾರಾಯಣ ಪೂಜೆ, ಗಣಹೋಮ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.
ಅ.16ರಂದು ಜನ್ನಾಪುರ ಕೆರೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದ್ದು, ಇದಕ್ಕೂ ಮೊದಲು ವಿವಿಧ ಕಲಾತಂಡಗಳೊಂದಿಗೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದೆ.
ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಅನುಸೂಧ ಮೋಹನ್ ಹಾಗೂ ಉಪಾಧ್ಯಕ್ಷ ಚನ್ನಪ್ಪ, ನಗರಸಭಾ ಸದಸ್ಯರಾದ ಕಾಂತರಾಜ್, ಕಾಂಗ್ರೆಸ್ ಮುಖಂಡ ಕೃಷ್ಣ ರಾಜ್, ಹರೀಶ್,ಮಂಜಪ್ಪ, ಮಂಜಣ್ಣ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್‌ರವರ ತಾಯಿ ಉಮಾದೇವಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಕಾಂತ್‌ರಾಜ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಬಿವಿಕೆ ಕೃಷ್ಣರಾಜ್, ಹರೀಶ್, ಸಂಘದ ಗೌರವಾಧ್ಯಕ್ಷ ಆರ್. ವೇಣುಗೋಪಾಲ್, ಅಧ್ಯಕ್ಷ ಸುಂದರ್, ಉಪಾಧ್ಯಕ್ಷ ಎಚ್ ಮಧುಸೂಧನ್, ಪ್ರಧಾನ ಕಾರ್ಯದರ್ಶಿ ಹರ್ಷ, ಮನೋಜ್ ಕುಮಾರ್, ಸಹ ಕಾರ್ಯದರ್ಶಿ ಧನುಷ್, ಪವನ್, ಮಂಜು, ಅರುಣ, ಸಂತೋಷ್, ಖಜಾಂಚಿ ಜಗದೀಶ್, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು, ಜನ್ನಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಪಾಲ್ಗೊಂಡಿದ್ದರು.
Also read: ಗಮನಿಸಿ! ಅ.16ರಂದು ಸೊರಬ ಪಟ್ಟಣ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ
ನಂತರ ಬಟ್ಟೆ ಹೊಲಿಯುವ ಯಂತ್ರ ಹಾಗೂ ಗಾರೆ ಕೆಲಸದ ಟೂಲ್ಸ್‌ಗಳನ್ನು ಶಾಸಕರ ಮುಖಾಂತರದಲ್ಲಿ ಫಲಾನುಭವಿಗಳಿಗೆ ವಿತರಿಸಲಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















