ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಉದ್ಯೋಗ ಆಶ್ರಿತರಾಗಿ ಆಗಮಿಸಿದವರಿಗೆ ಶುಭಾಶಯ ತಿಳಿಸಿದ Kirloskar Ferrous Industries Ltd., ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್. ವಿ. ಗುಮಾಸ್ತೆಯವರು, ಇಲ್ಲಿ ಭಾಗವಹಿಸಿರುವ ಕಾರ್ಖಾನೆಗಳು ಹೆಚ್ಚಾಗಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದರು. ಮತ್ತು ತಮ್ಮ ಕಂಪನಿಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ನೀಡಲು ಆದೇಶಿಸಿದರು.
ಮಂಗೋಟೆ ಶ್ರೀ ಮುರುಗೆಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ವಿಶ್ವೇಶ್ವರಯ್ಯ ಸ್ಕೂಲ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ರಾಘವೇಂದ್ರ MP Raghavendra ಮಾತನಾಡಿ, ಶಿವಮೊಗ್ಗ, ಭದ್ರಾವತಿ ನಗರಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರತಿಷ್ಠಿತ ಕಂಪೆನಿಗಳ ಉದ್ಯೋಗ ಮೇಳಗಳು ಸ್ಥಳೀಯ ಯುವಜನರಿಗೆ ಸಹಕಾರಿ ಎಂದು ಹೇಳಿದರು.
ಹೊಸಪೇಟೆ, ಕೊಪ್ಪಳ, ವಿಜಯನಗರ ಮತ್ತು ಶಿವಮೊಗ್ಗ ಜಿಲ್ಲೆಗಳ 25ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿದ್ದವು. ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಜಿಂದಾಲ್ ಮತ್ತು ಸಮೂಹ ಕಂಪನಿಗಳು, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಎಸ್ ಎಲ್ ಆರ್, ಸ್ಮಯಿರೂ, ಕಲ್ಯಾಣಿ ಸ್ಟೀಲ್, ಮುಕುಂದ್ ಸುಮಿ, ಎಕ್ಸ್ಇಂಡಿಯಾ, ಬಿ ಎಂ ಎಂ , ಎಂ ಎಸ್ ಪಿ ಎಲ್, ಶಿವಮೊಗ್ಗ ಜಿಲ್ಲೆಯ ಶಾಂತಲಾ ಪೌಂಡ್ರೀ ಮತ್ತು ಅನೇಕ ಹಾಸ್ಪಿಟಲ್‌ಗಳು, ಶಾಲೆಗಳು, ಪ್ರೈವೇಟ್ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸ್ಥಳದಲ್ಲೇ ನೇರ ಸಂದರ್ಶನ ನಡೆಸಿದರು. ಈ ಮೂಲಕ ತಮ್ಮ ಸಂಸ್ಥೆಗೆ ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೊಪ್ಪಳ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀವತ್ಸನ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಸಂಯೋಜಕ ಉಪಾಧ್ಯಕ್ಷರಾದ ಪಿ. ನಾರಾಯಣ ಇವರು ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಡರ್ ನೀಡಿ ಶುಭಾಶಯ ತಿಳಿಸಿದರು.
ಉದ್ಯೋಗ ಮೇಳೆದಲ್ಲಿ ಎಸ್ಎಸ್ಎಲ್ಸಿ, ಐಟಿಐ , ಡಿಪ್ಲೋಮಾ, ಬಿಎಸ್ ಸಿ, ಬಿಕಾಂ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಹೆಚ್ಚಾಗಿ ಭಾಗಿಯಾಗಿದ್ದರು. ಅದರಲ್ಲಿ ಮಹಿಳಾ ಅಭ್ಯರ್ಥಿಗಳು ಹೆಚ್ಚಾಗಿ ಭಾಗಿಯಾಗಿದ್ದು ಕಂಡುಬಂದಿತು.
ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಮತ್ತು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡರು ಮತ್ತು ಕಾರ್ಯಕ್ರಮದ ಅದ್ಯಕ್ಷ ಎಂಜಿ. ನಾಗರಾಜ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀವತ್ಸನ್, ಹೆಚ್ ಆರ್ ವಿಭಾಗದ ಸಂಯೋಜಕ ಉಪಾಧ್ಯಕ್ಷರಾದ ಪಿ. ನಾರಾಯಣ, ಪ್ರೆಸಿಡೆಂಟ್ ಸಿ. ರಮೇಶ್ ಮತ್ತು ರಾಜಕೀಯ ಮುಖಂಡರು, ಶಾಲಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಮುಖ್ಯಸ್ಥರು ಭಾಗಿಗಳಾಗಿದ್ದರು.
ಬೆಳಿಗ್ಗೆ 10ರಿಂದ ಸಾಯಂಕಾಲ ವರೆಗೆ ಸುಮಾರು 1000 ಕ್ಕೂ ಅಧಿಕ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಗಳಾಗಿ ಸುಮಾರು ಅಭ್ಯರ್ಥಿಗಳು ಅನೇಕ ಕಾರ್ಖಾನೆಯ ಆಯ್ಕೆಯ ಪಟ್ಟಿಯಲ್ಲಿ ಸೇರಿದರು. ಈ ಕಾರ್ಯಕ್ರಮ ಆಯೋಜಿಸಿದ್ದ ಮಂಗೋಟೆ ಶ್ರೀ ಮುರುಗೆಪ್ಪ ನವರ ಧರ್ಮಪತ್ನಿ ರತ್ನಮ್ಮ ಮಕ್ಕಳಾದ ನಾಗರಾಜ್, ರುದ್ರೇಶ ಮತ್ತು ಆನಂದ್ ರವರು ಸಂತಸ ವ್ಯಕ್ತಪಡಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲರಿಗೆಲ್ಲಾರಿಗೂ ಧನ್ಯವಾದ ತಿಳಿಸಿದರು.
ವರದಿ: ಮುರುಳಿಧರ್ ನಾಡಿಗೇರ್, ಹೊಸಪೇಟೆ: 9008017727
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post