ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೊನೆಯ ಶ್ರಾವಣ ಶನಿವಾರವಾದ ಇಂದು ನಗರದ ದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರ, ಪ್ರಸಾದ ವಿನಿಯೋಗ ನಡೆಯುತ್ತಿದ್ದು, ಭಕ್ತರ ದಂಡೆ ಹರಿದು ಬಂದಿತ್ತು.
ಹಳೆ ನಗರದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಮುಂಜಾನೆಯಿಂದ ಲಕ್ಷ್ಮೀ ನರಸಿಂಹ, ಶ್ರೀಕೃಷ್ಣ ಹಾಗೂ ಪುರುಷೋತ್ತಮ ದೇವರಿಗೆ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ನೆರವೇರಿಸಲಾಯಿತು.
ಪುರುಷೋತ್ತಮ ದೇವರಿಗೆ ವಿಶೇಷವಾಗಿ ಶ್ರೀನಿವಾಸ ದೇವರ ಅಲಂಕಾರ ಆಕರ್ಷಣೀಯವಾಗಿತ್ತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದು, ಮಧ್ಯಾಹ್ನದವರೆಗೂ ದೇವಾಲಯಕ್ಕೆ ಆಗಮಿಸುತ್ತಿದ್ದು, ಪ್ರಧಾನ ಅರ್ಚಕರಾದ ರಂಗನಾಥ ಶರ್ಮಾ, ಸಹಾಯಕ ಅರ್ಚಕರಾದ ಶ್ರೀನಿವಾಸ್, ದೇವಾಲಯ ಸಮಿತಿ ಅಧ್ಯಕ್ಷರಾದ ಮಾರುತಿ, ಪ್ರಮುಖರಾದ ನರಸಿಂಹಾಚಾರ್, ರಮಾಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇವಾಲಯದ ದಾಸೋಹ ಸಮಿತಿ ಹಾಗೂ ದೇವಾಲಯದ ಅರ್ಚಕರ ವತಿಯಿಂದ ಪ್ರತ್ಯೇಕವಾಗಿ ಸಾವಿರಾರು ಭಕ್ತರಿಗೆ ಅನ್ನದಾನ ನಡೆಸಲಾಯಿತು. ದಾಸೋಹ ಸಮಿತಿ ಅಧ್ಯಕ್ಷ ಜನಾರ್ಧನ ಅಯ್ಯಂಗಾರ್ ಅನ್ನದಾನದ ನೇತೃತ್ವ ವಹಿಸಿದ್ದರು.
ರಂಗಪ್ಪ ವೃತ್ತದಲ್ಲಿ ಶ್ರೀ ಶನೈಶ್ಚರ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಸಲಾಯಿತು.ಇಲ್ಲೂ ಸಹ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಉಳಿದಂತೆ ಗ್ರಾಮದೇವತೆ ಶ್ರೀ ಹಳದಮ್ಮ ಹಳೆ ನಗರದ ಶ್ರೀ ರಾಮೇಶ್ವರ ದೇವಸ್ಥಾನ, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠ, ಸುಣ್ಣದಹಳ್ಳೀ ಆಂಜನೇಯ ದೇವಸ್ತಾನ, ಹುತ್ತಾ ಕಾಲೀನಿಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ತಾ, ಈಶ್ವರ ದೇವಸ್ಥಾನ, ಹೊಸಮನೆಯ ಶ್ರೀ ಮಲ್ಲಿಕಾರ್ಜುನ ದೇವಸ್ತಾನ ಸೇರಿದಂತೆ ಬಹುತೇಕ ದೇವಾಲಯಗಳಿಗೆ ಭಕ್ತರ ದಂಡೆ ಹರಿದುಬಂದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post