ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳ `ರಾಷ್ಟ್ರಪತಿ ಭವನ’ದಲ್ಲಿ #RashtrapatiBhavan ವಿವಾಹ ಕಾರ್ಯಕ್ರಮವೊಂದು ನಡೆಯಲಿದ್ದು, ಇತಿಹಾಸ ನಿರ್ಮಾಣವಾಗಲಿದೆ.
ಹೌದು… ವಿವಾಹಗಳು ಸಾಮಾನ್ಯವಾಗಿ ಕಲ್ಯಾಣ ಮಂಟಪ, ರೆಸಾರ್ಟ್, ಬೀಚ್, ಕೆಲವೊಂದು ಅರಮನೆ ಸೇರಿದಂತೆ ಡೆಸ್ಟಿನೇಷನ್ ಪ್ಲಾನ್ ವಿವಾಹಗಳು ನಡೆಯುತ್ತವೆ. ಆದರೆ, ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ವಿವಾಹವೊಂದು ನಡೆಯಲಿದೆ.
Also Read>> ಶಿವಮೊಗ್ಗ | ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಸ್ತನ ಕ್ಯಾನ್ಸರ್ ತಪಾಸಣೆ
ಯಾರ ಮದುವೆ?
ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ #President ದ್ರೌಪದಿ ಮುರ್ಮು ಅವರ ಖಾಸಗಿ ಭದ್ರತಾ ಸಿಬಂದಿ ಆಗಿರುವ ಸಿಆರ್’ಪಿಎಫ್ #CRPF ಅಸಿಸ್ಟೆಂಟ್ ಕಮಾಂಡೆಂಟ್ ಪೂನಂ ಗುಪ್ತಾ ಮದುವೆಯನ್ನು ವೈಭವೋಪೇತ ಬಂಗಲೆಯಲ್ಲಿ ನಡೆಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಅವನೀಶ್ ಕುಮಾರ್ ಎನ್ನುವವರು ಪೂನಂ ಗುಪ್ತಾ ಅವರನ್ನು ಫೆ.12ರಂದು ವಿವಾಹವಾಗಲಿದ್ದಾರೆ.
ಎಲ್ಲಿ ನಡೆಯಲಿದೆ ವಿವಾಹ?
ರಾಷ್ಟ್ರಪತಿ ಭವನದ ಸಂಕೀರ್ಣದ ಮದರ್ ತೆರೆಸಾ ಕ್ರೌನ್ ಕಾಂಪ್ಲೆಕ್ಸ್’ನಲ್ಲಿ ವಿವಾಹ ನಡೆಯಲಿದ್ದು, ಈ ಪ್ರದೇಶ ಸುಮಾರು 300 ಎಕರೆಯಲ್ಲಿದೆ. ಇದಕ್ಕಾಗಿ ಎಲ್ಲ ಸಿದ್ದತೆಗಳು ನಡೆಯಲಿದ್ದು, ಭದ್ರತಾ ದೃಷ್ಠಿಯಿಂದ ಹತ್ತಿರದ ಸಂಬಂಧಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅವನೀಶ್ ಕುಮಾರ್ ಯಾರು?
ಪೂನಂ ಅವರನ್ನು ವಿವಾಹಗಾಗಲಿರುವ ಜಮ್ಮು ಕಾಶ್ಮೀರ ಮೂಲದ ಅವನೀಶ್ ಕುಮಾರ್ ಸಿಆರ್’ಪಿಎಫ್’ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದಾರೆ. ಪೂನಂ ಗುಪ್ತಾ ಅವರ ಕೋರಿಕೆಯನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಒಪ್ಪಿಕೊಂಡಿದ್ದು, ರಾಷ್ಟ್ರಾಧ್ಯಕ್ಷರ #PresidentOfIndia ಬಂಗಲೆಯೊಳಗೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ.
ಪೂನಂ ಗುಪ್ತಾ ಕುರಿತಾಗಿ?
ಗಣಿತದಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಪಿಜಿ ಹಾಗೂ ಬಿಎಡ್ ಪದವಿ ಪಡೆದಿರುವ ಪೂನಂ ಗುಪ್ತಾ ಅವರು, 2018ರಲ್ಲಿ ಯುಪಿಎಸ್’ಸಿ ಸಿಎಪಿಎಫ್ ಪರೀಕ್ಷೆ ಎದುರಿಸಿ 18ನೇ ರ‍್ಯಾಂಕ್ ಪಡೆದು ಆಯ್ಕೆಯಾದವರು.
ಬಿಹಾರದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಸೇವೆ ಸಲ್ಲಿಸಿರುವ ಇವರು ಸದ್ಯ ರಾಷ್ಟ್ರಪತಿ ಭವನದಲ್ಲಿ ಸಿಆರ್’ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಕ್ಷ ಅಧಿಕಾರಿ ಎಂದೇ ಹೆಸರು ಪಡೆದಿರುವ ಪೂನಂ ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದ ಪರೇಡ್’ನಲ್ಲಿ ಸಂಪೂರ್ಣ ಮಹಿಳಾ ತುಕಡಿಯನ್ನು ಮುನ್ನಡೆಸಿದ್ದರು. ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ಸಿಆರ್’ಪಿಎಫ್ ಮಹಿಳೆಯರ ವಿಭಾಗವನ್ನು ಪೂನಂ ಗುಪ್ತಾ ಮುನ್ನಡೆಸಿದ್ದು ದೇಶದ ಗಮನಸೆಳೆದಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post