ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಅಂತರಗಂಗೆ ವಲಯದ ಕಾರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪೇಗೌಡ ನಗರದ ಕಾರೇಹಳ್ಳಿ ಕೆರೆಗೆ ಶಾಸಕ ಬಿ.ಕೆ. ಸಂಗಮೇಶ್ವರ್ MLA Sangameshwar ಬಾಗಿನ ಅರ್ಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವತಿಯಿಂದ ಬಾಗಿನ ಅರ್ಪಣೆ, ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯ ವತಿಯಿಂದ ನೀಡಿರುವ 7.50ಲಕ್ಷ ರೂ. ಅನುದಾನದಲ್ಲಿ ನಮ್ಮೂರು ನಮ್ಮ ಕೆರೆ ಹೂಳೆತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು ಕೆರೆ ಸಂರಕ್ಷಣೆಯನ್ನು ನಾವೆಲ್ಲ ಸೇರಿ ಮಾಡೋಣ ಎಂದರು.

Also read: ಪ್ರಥಮ ಬಾರಿಗೆ ರಾಜ್ಯಸರ್ಕಾರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ: ಸಚಿವ ಅಶ್ವತ್ಥನಾರಾಯಣ
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಹಾಯಕ ನಿರ್ದೇಶಕರಾದ ಉಪೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಮಾರಿ ಮಮತಾ, ಉಪಾಧ್ಯಕ್ಷರಾದ ಅಂಬಿಕಾ, ಕೆರೆ ಸಮಿತಿ ಅಧ್ಯಕ್ಷರಾದ ಯೋಗೀಶ್, ಕೆರೆ ಇಂಜಿನೀಯರ್ ಗಣಪತಿ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರಾದ ಪ್ರಕಾಶ್ ವೈ, ಕಾರೇಹಳ್ಳಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು, ಕೃಷಿ ಮೇಲ್ವಿಚಾರಕರಾದ ಗೋವಿಂದಪ್ಪ, ವಲಯದ ಮೇಲ್ವಿಚಾರಕರಾದ ಕುಮಾರ್, ಸ್ಥಲೀಯಾ ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು, ಇಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಊರಿನ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.









Discussion about this post