ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲ್ಲೂಕಿನ ಮಾರುತಿ ನಗರದ ಸಮೀಪವಿರುವ ಹೊನ್ನಾವರ-ಬೆಂಗಳೂರು ಮುಖ್ಯರಸ್ತೆಯಲ್ಲಿ 1 ಕೋಟಿ ರೂ. ವೆಚ್ಚದ ಸೇತುವೆ ಅಗಲೀಕರಣ ಕಾಮಗಾರಿಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಸಂತೋಷ್ ಕುಮಾರ್, ಆರ್‌ಐ ಪ್ರಶಾಂತ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಹನುಮಂತರಾವ್, ಉಪಾಧ್ಯಕ್ಷೆ ಸುಮಾ ಪರಮೇಶ್ವರ್, ಸದಸ್ಯರಾದ ಚೇತನ್ ರಾವ್, ಕಾಂಗ್ರೆಸ್ ಮುಖಂಡರಾದ ದಶರಥಗಿರಿ, ಕೃಷ್ಣ, ಆರುಮುಗಮ್, ಹಾಗೂ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.
ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ:
ತಾಲೂಕಿನ ಕಾಗೆಕೋಡಮಗ್ಗೆ ಗ್ರಾಮದ ಸಮೀಪದಲ್ಲೇ ಭದ್ರಾನದಿ ಹರಿಯುತ್ತಿದ್ದು ನೀರಿನ ಹರಿಯುವಿಕೆಯ ಪ್ರಮಾಣ ಹೆಚ್ಚಾದಾಗ ಮುಖ್ಯ ರಸ್ಥೆಯ ಸೇತುವೆ ಮುಳುಗಡೆ ಹೊಂದುವುದರ ಮೂಲಕ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗುತ್ತಿದ್ದನ್ನು ಮನಗಂಡ ಶಾಸಕ ಬಿ.ಕೆ.ಸಂಗಮೇಶ್ವರ್ ಸೇತುವೆ ಅಭಿವೃದ್ಧಿ ಪಡಿಸುವ ಸಲುವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಕಾಮಗಾರಿ ಮಂಜೂರು ಮಾಡಿಸಿ ಸಿಮೆಂಟ್ ರಸ್ತೆಗಳ ನಿರ್ಮಾಣ ಕಾಮಗಾರಿ ಹಾಗೂ ಸೇತುವೆ ಒಳಗೊಂಡಂತೆ ಒಟ್ಟಾರೆ 1 ಕೋಟಿ 63 ಲಕ್ಷ ರೂ. ವೆಚ್ಚದ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ನಗರಸಭಾ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಕೀಲಾಬಾನು, ಉಪಾಧ್ಯಕ್ಷೆ ಶಬ್ನಮ್ ಬಾನು, ಸದಸ್ಯರಾದ ಆಬಿದ್, ಶೋಭಾ, ಜಬೀವುಲ್ಲ, ರೂಪ, ಶಿವಲಿಂಗೇಗೌಡ, ಮಾಜಿ ಅಧ್ಯಕ್ಷ ಸೈಯ್ಯದ್ ನಜುರುಲ್ಲಾ, ಕಾಂಗ್ರೆಸ್ ಮುಖಂಡರಾದ ದಶರಥಗಿರಿ, ಕೃಷ್ಣ, ಆರುಮುಗಮ್, ಹಾಗೂ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗೌರಾಪುರದಲ್ಲಿ ಹೈಟೆಕ್ ಶೌಚಾಲಯ:
ತಾಲ್ಲೂಕು ಗೌರಾಪುರದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಗುದ್ದಲಿಪೂಜೆಯನ್ನು ನೆರವೇರಿಸಿದರು.
ಗ್ರಾಮದ ಮುಖಂಡ ಶಿವರಾಮ್, ಎಂ.ಮಂಜಪ್ಪ, ಕೃಷ್ಣ, ಪರಶುರಾಮ್, ವಿಜಯಕುಮಾರ್, ರಮೇಶ್, ಜಯಕುಮಾರ್, ಬೂದಾಳ್ ಕೆಂಚಪ್ಪ, ಚನ್ನಬಸಪ್ಪ, ನಗರಸಭಾ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post