ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕುಖ್ಯಾತ ರೌಡಿ ಶೀಟರ್ 20ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿ ಪೋಲೀಸ್ ಇಲಾಖೆಗೆ ಬೇಕಾಗಿದ್ದ ಕಡೇಕಲ್ ಅಬೀದ್ ಕಾಲಿಗೆ ಗುಂಡು ಹಾರಿಸಿ ಪೋಲೀಸರು ಬಂಧಿಸಿದ್ದಾರೆ.
Also Read>> ಮಡಿಕೇರಿ | ಜಿಲ್ಲೆಯಲ್ಲಿ 21 ಕ್ಷಯಮುಕ್ತ ಗ್ರಾಮ ಪಂಚಾಯತಿ ಆಯ್ಕೆ
ಕಳೆದ ಒಂದು ತಿಂಗಳಿಂದ ತಲೆ ಮರೆಸಿಕೊಂಡು ತಿರುಗುತ್ತಿದ್ದ ಕಡೇಕಲ್ ಅಬೀದ್ ಇಂದು ಪೇಪರ್ ಟೌನ್ ವ್ಯಾಪ್ತಿಯಲ್ಲಿ ಇರುವುದರ ಸುಳಿವು ಪಡೆದ ಪೇಪರ್ ಟೌನ್ ಇನ್ಸ್’ಪೆಕ್ಟರ್ ನಾಗಮ್ಮ ಆರೋಪಿಯನ್ನು ಅಬೀದ್ ನನ್ನು ಬಂಧಿಸಲು ತೆರಳಿದ್ದಾರೆ.
ಈ ವೇಳೆ ಇನ್ಸ್’ಪೆಕ್ಟರ್ ನಾಗಮ್ಮ ಶರಣಾಗದ ಅಬೀದ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಗಾಯಗೊಂಡ ಅಬೀದ್ ನನ್ನು ವಶಕ್ಕೆ ಪಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಸಿಬ್ಬಂದಿ ಅರುಣ್ ಕುಮಾರ್ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿ ಶೀಟರ್ ಅಬೀದ್ ವಿರುದ್ಧ ವಿವಿಧ ಠಾಣೆಗಳಲ್ಲಿ 20 ಪ್ರಕರಣಗಳಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post