ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿಯ ಜೆಪಿಎಸ್ 110 kV ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜ.25ರಂದು ರಾತ್ರಿ 20 MVA ಪರಿವರ್ತಕ ದ ಕರೆಂಟ್ ಟ್ರಾನ್ಸ್ ಫಾರ್ಮರ್ ವಿಫಲವಾಗಿದ್ದು , ವಿದ್ಯುತ್ ಸರಬರಾಜಿನಲ್ಲಿ ಭಾರಿ ಅಡಚಣೆ ಉಂಟಾಗಿದೆ.
ವ್ಯವಸ್ಥೆ ಪುನರ್ ಸ್ಥಾಪಿಸುವವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಆಗಾಗ್ಗೆ ವ್ಯತ್ಯಯ ಉಂಟಾಗಲಿದೆ. ದಯವಿಟ್ಟು ಗ್ರಾಹಕರು, ಸಾರ್ವಜನಿಕರು, ರೈತರು ಸಹಕರಿಸಲು ಕೋರಲಾಗಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಕಾರೇಹಳ್ಳಿ ,ಅಂತರಗಂಗೆ, ಬಾರೆಂದೂರು, ದೊಡ್ಡೇರಿ, ಎರೆಹಳ್ಳಿ ಮಾವಿನಕೆರೆ,ಹಿರಿಯೂರು, ಕಂಬದಾಲ್ ಹೊಸೂರ್ ಆರಳಿಕೊಪ್ಪ ಮತ್ತು ಕಲ್ಲಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳು, ನ್ಯುಟೌನ್, ಜನ್ನಾಪುರ , ಹುತ್ತ ಕಾಲೋನಿ, ಉಜ್ಜನಿಪೂರ, ಟಿ.ಕೆ ರಸ್ತೆ, ಸುಣ್ಣದಹಳ್ಳಿ ಬೋಮ್ಮನಕಟ್ಟೆ, ಹಳೇ/ ಹೊಸ ಸಿದ್ದಾಪುರ , ಕುಡಿಯುವನೀರು ಸಿಎಮ್‌ಸಿ ಸಿಟಿ ಸ್ಥಾವರಗಳು. ಭದ್ರಾ ಪೇಪರ್ ಮಿಲ್, ಎಂಪಿಎಂ ಟೌನ್ ಶಿಪ್ , ದೊಡ್ಡಗೊಪ್ಪೇನಲ್ಲಿ, ಮಿಲ್ಟ್ರಿ ಕ್ಯಾಂಪ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post