ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಾಲಾ ಚಟುವಟಿಕೆಯ ಪ್ರತಿಯೊಂದರಲ್ಲೂ ವಿಶಿಷ್ಟತೆಯನ್ನು ಕಾಯ್ದುಕೊಂಡು ಬರುತ್ತಿರುವ ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಪೂರ್ವ ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿಯಾಗಿ ನಡೆಯಿತು.
ವಿಶೇಷವಾಗಿ ಶಾಲಾ ಸಂಸತ್ತು ಚುನಾವಣೆಯನ್ನು ಮೊಬೈಲ್ ಆಪ್ ಬಳಕೆ ಮಾಡಿ ಡಿಜಿಟಲ್ ವೋಟಿಂಗ್ ಮುಖಾಂತರ ನಡೆಸಲಾಯಿತು. ಚುನಾವಣೆಯಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.

ಉಪಾಧ್ಯಕ್ಷರಾಗಿ ಸುರೇಶ್ ಗೌಡ, ಸಿ.ಎನ್. ಶ್ರೇಯ ಹಾಗೂ ಕಾರ್ಯದರ್ಶಿಯಾಗಿ ಜಿ.ಎಸ್. ಪುನೀತ್ ಮತ್ತು ಸಹ ಕಾರ್ಯದರ್ಶಿಯಾಗಿ ಹರ್ಷಿತ್. ಖಜಾಂಚಿಯಾಗಿ ಪ್ರಿಯಾಂಕ ಆಯ್ಕೆಯಾದರು.
Also read: ಗುರೂಜಿ ಹತ್ಯೆ ಪ್ರಕರಣ: 4 ಗಂಟೆಗಳಲ್ಲಿ ಸಿನಿಮೀಯ ರೀತಿಯಲ್ಲಿ ಹಂತಕರು ಅಂದರ್
ವಿದ್ಯಾಸಂಸ್ಥೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ಆಡಳಿತಾಧಿಕಾರಿ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










Discussion about this post