ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾಲೇಜು ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಏರ್ಪಡಿಸುವುದರಿಂದ ಅವರಲ್ಲಿ ಕಾವ್ಯ ರಚನೆ ಮಾಡಲು ಆಸಕ್ತಿ ಬೆಳೆಯುತ್ತದೆ. ಆ ಮೂಲಕ ಯುವ ಸಮೂಹದಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು.
ಅವರು ಕನ್ನಡ ಸಾಹಿತ್ಯ ಸಾಂಸ್ಕೃತ ವೇದಿಕೆಯಿಂದ ಆಂಜನೇಯ ಅಗ್ರಹಾರ, ಉಂಬ್ಳೆಬೈಲು ರಸ್ತೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಂಗಾರು ಕಾವ್ಯ ಧಾರೆ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಿಂದ ಸಾಹಿತ್ಯ ಕಮ್ಮಟ, ಮಕ್ಕಳ ಸಾಹಿತ್ಯ ಸಮ್ಮೇಳನ, ಮಾತೃಭಾಷೆ ದಿನಾಚರಣೆ ಮತ್ತು ಶ್ರಾವಣ ಸಂಭ್ರಮ ಸೇರಿದಂತೆ ವಿಭಿನ್ನ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಸಾಂಸ್ಕೃತ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆಗೆ ಉತ್ತೇಜನದ ಜೊತೆಗೆ ಕಥೆ, ಕವನ, ಕಾದಂಬರಿ ಹಾಗೂ ಸೃಜನಶೀಲ ಬರವಣಿಗೆ ಸೇರಿದಂತೆ ಸಾಹಿತ್ಯಪರ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡು ಕನ್ನಡ ಭಾಷೆ ಮೇಲಿನ ಹಿಡಿತ ಸಾಧಿಸಿ ಭಾಷಾ ಅಭಿಮಾನ ಬೆಳೆಸುವ ಕಾರ್ಯ ಕೃಗೊಳ್ಳಲಾಗುತ್ತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಹಿರಿಯ ಲೇಖಕ, ಸಾಹಿತಿ ಜಿ.ವಿ ಸಂಗಮೇಶ್ವರ, ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಡಾ. ವಿಜಯದೇವಿ, ಕ.ಸಾ.ಪ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ, ಉಪಾಧ್ಯಕ್ಷ ಬಿ.ಕೆ ಜಗನ್ನಾಥ್, ನಿಕಟಪೂರ್ವ ಅಧ್ಯಕ್ಷ ಕೊಡ್ಲುಯಜ್ಞಯ್ಯ ಕ.ಸಾ. ಸಾಂ ವೇದಿಕೆ ಕಾರ್ಯದರ್ಶಿ ಉಮಾಪತಿ, ಖಜಾಂಚಿ ಗಂಗರಾಜ್, ಸಂಘಟನಾ ಕಾರ್ಯದರ್ಶಿ ಕಮಲಕುಮಾರಿ, ಕಾಂತಪ್ಪ ಬಣಗಾರ್, ಪ್ರಕಾಶ್, ಕಮಲಾಕರ್, ತಿಪ್ಪಮ್ಮ, ಮಲ್ಲಿಕಾಂಬ, ಇಂದಿರಾ, ಮಾಯಮ್ಮ, ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post