ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಹುತ್ತಾ ಕಾಲೋನಿಯಲ್ಲಿರುವ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪ್ರತೀಕ್ಷಾ ದಯನಂದ್ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ 625ಕ್ಕೆ 625ಕ್ಕೆ ಅಂಕ ಗಳಿಸುವ ಮೂಲಕ ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
Also Read: ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು?ಇನ್ನು, ಶಾಲೆ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 78 ಡಿಸ್ಟಿಂಕ್ಷನ್ ಹಾಗೂ 13 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್’ನಲ್ಲಿ ಉತ್ತೀರ್ಣಗೊಂಡಿದ್ದಾರೆ.
ಶಾಲೆಯ ಸಾಧಕ ವಿದ್ಯಾರ್ಥಿಗಳಿವರು
- ಪ್ರತೀಕ್ಷಾ ದಯಾನಂದ್ 625 ಅಂಕ
- ಪ್ರಥಮ್ ಸ್ವರೂಪ್ 624 ಅಂಕ(ರಾಜ್ಯ ಮಟ್ಟದ 2ನೆಯ ರ‍್ಯಾಂಕ್ )
- ತ್ರಿಶಾಂತ್ ಎನ್. ರಾಜ್ 624 ಅಂಕ(ರಾಜ್ಯ ಮಟ್ಟದ 2ನೆಯ ರ‍್ಯಾಂಕ್ )
- ರುಚಿತಾ ಎಸ್. 623 ಅಂಕ(ರಾಜ್ಯ ಮಟ್ಟದ 2ನೆಯ ರ‍್ಯಾಂಕ್ )
- ಶ್ರೇಯಸ್ ಎನ್.ಎಂ. 623 ಅಂಕ(ರಾಜ್ಯ ಮಟ್ಟದ 2ನೆಯ ರ‍್ಯಾಂಕ್ )
Also Read: 250 ಮಿಮೀ ಮಳೆ, 4 ಸಾವಿರ ಮನೆ ಜಲಾವೃತ, ಪರಿಹಾರಕ್ಕೆ ಕ್ರಮ: ಸಂಸದ ರಾಘವೇಂದ್ರ
ಇನ್ನು ಮೊದಲ ಭಾಷೆ ಸಂಸ್ಕೃತದಲ್ಲಿ 11, ಮೊದಲ ಭಾಷೆ ಕನ್ನಡದಲ್ಲಿ 12, ಎರಡನೆಯ ಭಾಷೆ ಇಂಗ್ಲಿಷ್’ನಲ್ಲಿ 20, ಮೂರನೆಯ ಭಾಷೆ ಕನ್ನಡದಲ್ಲಿ 8, ಮೂರನೆಯ ಭಾಷೆ ಹಿಂದಿಯಲ್ಲಿ 19, ಗಣಿತದಲ್ಲಿ 24, ವಿಜ್ಞಾನದಲ್ಲಿ 16 ಹಾಗೂ ಸಮಾಜ ವಿಜ್ಞಾನದಲ್ಲಿ 30 ಶೇ.100 ರಷ್ಟು ಅಂಕವನ್ನು ಶಾಲೆಯ ವಿದ್ಯಾರ್ಥಿಗಳು ಗಳಿಸಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದ್ದು, ಭದ್ರಾವತಿಯ ಕಲ್ಪ ಮೀಡಿಯ ಹೌಸ್ ಸಹ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post