ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತರೀಕೆರೆಯ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ವೇ.ಬ್ರ. ಮಹೇಶ್ವರ ಮೂರ್ತಿ ಇವರ ಪೌರೋಹಿತ್ಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ರಾತ್ರಿ ಸಂಗಮೇಶ್ವರ ಮಂಟಪದ ಸಮೀಪ ಭದ್ರಾ ನದಿದಡದಲ್ಲಿ ವಿಶೇಷ ಪೂಜೆ ಗಣಹೋಮ, ರುದ್ರಹೋಮ, ನವಗ್ರಹ ಪೂಜೆ ನೆರವೇರಿಸಲಾಯಿತು.
ಮಹಾಶಿವರಾತ್ರಿ ಪ್ರಯುಕ್ತ ಭದ್ರಾನದಿಯ ಮದ್ಯದಲ್ಲಿರುವ ಶ್ರೀಸಂಗಮೇಶ್ವರಲಿಂಗ, ಗಣಪತಿ, ನಾಗದೇರು, ನಂದಿ ವಿಗ್ರಹಗಳಿರುವ ಮಂಟಪಕ್ಕೆ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ವೀರಶೈವ ಸೇವಾ ಸಮಿತಿ ವತಿಯಿಂದ ಬುಧವಾರ ಸಂಜೆಯಿಂದ ಗುರುವಾರ ಬೆಳಗಿನಜಾವದವರೆಗೆ ಭದ್ರಾನದಿದಡದಲ್ಲಿ ವಿಶೇಷ ಪೂಜೆ ಗಣಹೋಮ, ರುದ್ರಹೋಮ, ನವಗ್ರಹ ಪೂಜೆ ನಡೆಯಿತು.
ಗುರುವಾರ ಬೆಳಗಿನ ಜಾವದಿಂದ ಶುಕ್ರವಾರ ಬೆಳಗಿನ ಜಾವದವರೆಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಮಾಸ್ಕ್ ಧರಿಸಿ ಬರುವಂತೆ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post