ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪ್ರಕರಣದ ವಿಚಾರಣೆ ಸಂಬಂಧ ನಗರದ ನ್ಯಾಯಾಲಯಕ್ಕೆ ಆಗಮಿಸಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಶಿವಮೊಗ್ಗ ನಿವಾಸಿ ಎಂ.ಅರ್. ಗೋಪಾಲಕೃಷ್ಣ (72 )ಮೃತಪಟ್ಟಿದ್ದು, ಬೆಳಿಗ್ಗೆ ನ್ಯಾಯಾಧೀಶರ ಕೊಠಡಿ ಹೊರಗೆ ಕುಳಿತು ಕೊಂಡಿದ್ದಾಗ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
Also read: ಅಕ್ರಮ ಗಾಂಜಾ ಮಾರಾಟ: ಮೂವರ ಬಂಧನ
ಗೋಪಾಲಕೃಷ್ಣರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದು ಖಚಿತ ಪಡಿಸಿದ್ದಾರೆ. ನಂತರ ಮೃತದೇಹವನ್ನು ಶಿವಮೊಗ್ಗಕ್ಕೆ ಕಳುಹಿಸಲಾಯಿತು. ನಗರದ ಆರ್ಯವೈಶ್ಯ ಸಮಾಜ ಸಂತಾಪ ಸೂಚಿಸಿದೆ.
ಶಿವಮೊಗ್ಗ ಸೋಮಿನಕೊಪ್ಪ ನಿವಾಸಿ ಗೋಪಾಲಕೃಷ್ಣರವರು ಪ್ರಕರಣವೊಂದರ ವಿಚಾರಣೆಗಾಗಿ ಪತ್ನಿ ಹಾಗು ಇಬ್ಬರು ಪುತ್ರರ ಜೊತೆ ಇಲ್ಲಿಗೆ ಆಗಮಿಸಿದ್ದರು. ಎಂದು ತಿಳಿದುಬಂದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















