ಭದ್ರಾವತಿ: ದೇಶದ ಹೆಮ್ಮೆಯ ಕಾರ್ಖಾನೆಗಳಲ್ಲಿ ಒಂದು ಎಂದು ಹೆಸರು ಪಡೆದಿದ್ದ ವಿಐಎಸ್’ಎಲ್ ಖಾಸಗೀಕರಣ ಅಥವಾ ಮುಚ್ಚುವ ಹಂತಕ್ಕೆ ಬಂದು ನಿಂತಿದ್ದು, ಇದರ ಉಳಿವಿಗಾಗಿ ಕಾರ್ಮಿಕರು ದೇವರ ಮೊರೆ ಹೋಗಿದ್ದಾರೆ.
ವಿಐಎಸ್’ಎಲ್ ಕಾರ್ಖಾನೆಯ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದೇ ಬೆಳವಣಿಗೆಯಲ್ಲಿ ಕಾರ್ಖಾನೆ ಮುಚ್ಚಿಯೂ ಹೋಗಬಹುದು ಎಂಬ ಆತಂಕ ಭದ್ರಾವತಿಯಲ್ಲಿ ಹಾಗೂ ಕಾರ್ಮಿಕರಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ನಗರದ ಐತಿಹಾಸಿಕ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮೊರೆ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ನೂರಾರು ಕಾರ್ಮಿಕರು ಹಳೇ ನಗರದಲ್ಲಿರುವ ದೇವಾಲಯದಲ್ಲಿ ಸೇರಿ ಶ್ರೀಲಕ್ಷ್ಮೀ ನರಸಿಂಹ ಮೂಲ ಮಂತ್ರವನ್ನು ಪಠಿಸುವ ಮೂಲಕ, ಕಾರ್ಖಾನೆ ಉಳಿದು, ನೂರಾರು ಕುಟುಂಬಗಳನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮಾ ಅವರು ಕಾರ್ಮಿಕರಿಗೆ ಶ್ರೀಲಕ್ಷ್ಮೀ ನರಸಿಂಹ ಮೂಲ ಮಂತ್ರ ಉಪದೇಶಿಸಿ, ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Discussion about this post