ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಜನ ವಿರೋಧಿಯಾಗಿದ್ದು, ತತಕ್ಷಣವೇ ಈ ನಿರ್ಣಯವನ್ನು ಬದಲಾಯಿಸಿ, ಸರ್ಕಾರಿ ಸ್ವಾಮ್ಯದಲ್ಲಿಯೇ ಮುಂದುವರೆಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ Siddaramaiah ಅವರು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಪ್ರಧಾನಿಯವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದು, ವಿಐಎಸ್’ಎಲ್ ಕಾರ್ಖಾನೆ VISL Factory ಮುಚ್ಚುವ ನಿರ್ಧಾರ ಜನವಿರೋಧಿಯಾಗಿದೆ. ಇಂತಹ ಕೆಲಸದಿಂದ ಕಾರ್ಮಿಕರು ಹಾಗೂ ಸ್ಥಳೀಯರ ಜೀವನ ನಾಶವಾಗಲಿದೆ. ಹೀಗಾಗಿ ನಿರ್ಧಾರ ಬದಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
Also read: ಫೆ.8ರ ನಾಳೆ ಶಿವಮೊಗ್ಗಕ್ಕೆ ಸಿಎಂ ಬೊಮ್ಮಾಯಿ ಭೇಟಿ: ಏನೆಲ್ಲಾ ಕಾರ್ಯಕ್ರಗಳು ನಿಗದಿಯಾಗಿವೆ?

3 ವರ್ಷದಿಂದ ಈಚೆಗೆ 13 ಸಾರ್ವಜನಿಕ ಸಂಸ್ಥೆಗಲನ್ನು ಮುಚ್ಚಿದ್ದೀರಿ. 37 ಸಂಸ್ಥೆಗಳು ರೂ. 6,103 ಕೋಟಿ ನಷ್ಟದಲ್ಲಿ ನಡೆಯುತ್ತಿದ್ದು, ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ನಾಗಮೋಹನ್ ದಾಸ್ ವರದಿ ಪ್ರಕಾರ ಶೇ.2ರಷ್ಟು ಮಾತ್ರ ಸರ್ಕಾರಿ ಉದ್ಯೋಗಗಳಿದ್ದು, ಸರ್ಕಾರಿ ಉದ್ಯೋಗಗಳಿಂದ ಮಾತ್ರ ಎಸ್’ಸಿ, ಎಸ್’ಟಿ ಮೀಸಲಾತಿ ಸಾಧ್ಯ. ಇದೀಗ ಒಂದೊಂದಾಗಿ ಸಾರ್ವಜನಿಕ ಸಂಸ್ಥೆಗಲನ್ನು ಮುಚ್ಚುತ್ತಾ ಬಂದರೆ ಪರಿಶಿಷ್ಟರ ಉದ್ಯೋಗಾವಕಾಶ ಕಸಿದುಕೊಂಡಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.












Discussion about this post