ಕಲ್ಪ ಮೀಡಿಯಾ ಹೌಸ್ | ಟರ್ಕಿ |
ಭಾರೀ ಪ್ರಬಲವಾದ ಭೂಕಂಪನದಿಂದ ಟರ್ಕಿ-ಸಿರಿಯಾ ಅಕ್ಷರಶಃ ಸ್ಮಶಾನವಾಗಿ ಪರಿಣಮಿಸಿದೆ.
ಸದ್ಯ ಪ್ರಕಟಗೊಂಡಿರುವ ಮಾಹಿತಿಯಂತೆ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಲಕ್ಷಾಂತರ ಮಂದಿ ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದರೆ, ಕುಟಂಬಸ್ಥರನ್ನು ಕಳೆದುಕೊಂಡು ರೋಧಿಸುತ್ತಿರುವ ದೃಶ್ಯ ಪ್ರಪಂಚವೇ ಕಣ್ಣೀರು ಹಾಕುವಂತೆ ಮಾಡಿದೆ.
ಹೀಗೆ ಸಂಭವಿಸಿದ ಭೂಕಂಪನದ ಪರಿಣಾಮ ಕುಸಿದು ಬಿದ್ದ ಕಟ್ಟಡದ ಅವಶೇಷದ ಅಡಿಯಲ್ಲಿಯೇ ಮಹಿಳೆಯೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ದುರಂತ ಎಂದರೆ ಮಗುವಿಗೆ ಜನ್ಮ ನೀಡಿದ ತಾಯಿ ಹಾಗೂ ಮಗುವಿನ ತಂದೆ ಇಬ್ಬರೂ ಅವಶೇಷದ ಅಡಿಯಲ್ಲೇ ಅಸುನೀಗಿದ್ದಾರೆ.
ಆದರೆ, ಪವಾಡ ಎಂಬಂತೆ ಅವಶೇಷಗಳ ಅಡಿಯಲ್ಲಿ ಜನಿಸಿದ ಹಸುಗೂಸು ಜೀವಂತವಾಗಿದ್ದು, ಸಿಬ್ಬಂದಿಗಳು ರಕ್ಷಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
This girl, who hasnt have a name yet, was born today under the wreckage during the #earthquake in Afrin in #Syria, both her parents died, she made it alive. Born an orphan.
pic.twitter.com/PgT3vIy7SG— Zaina Erhaim #FreeAlaa (@ZainaErhaim) February 6, 2023
ರಕ್ಷಣಾ ಸಿಬ್ಬಂದಿಗೆ ಶಿಶುವನ್ನು ಹೊರತೆಗೆದ ವೀಡಿಯೋವನ್ನು ಸ್ಥಳೀಯ ಪತ್ರಕರ್ತರೊಬ್ಬರು ಶೇರ್ ಮಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
Also read: ಭದ್ರಾವತಿಯ ವಿಐಎಸ್’ಎಲ್ ಕುರಿತು ಪ್ರಧಾನಿ ಮೋದಿಗೆ ಸಿದ್ಧರಾಮಯ್ಯ ಬರೆದ ಪತ್ರದಲ್ಲಿ ಏನಿದೆ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post