ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತಿರುವ ಎಂದು ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕರಕುಚ್ಚಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುಣ್ಯ ಸ್ಮರಣೆ ಯ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಇತ್ತೀಚಿನ ದಿನಗಳಲ್ಲಿ ಸಮಾನತೆ-ಮಾನವತೆಯ ಮಹೋನ್ನತ ಸಾರ ಸಾರುವ ಸಂವಿಧಾನವನ್ನು ಬುಡಮೇಲು ಮಾಡುವ ಸಂಚು ನಡೆಯುತ್ತಿದ್ದು ಇದನ್ನು ತಡೆಯಲು ಧರ್ಮಾತೀತ, ಜಾತ್ಯಾತೀತವಾಗಿ ಸಂಘಟಿತ ಹೋರಾಟಕ್ಕೆ ಅಣಿಯಾಗಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದೇಶಭಕ್ತಿ,ಹುಸಿ ರಾಷ್ಟೀಯವಾದ, ಧರ್ಮ ದ ಹೆಸರಿನಲ್ಲಿ ಸಂವಿಧಾನದ ಆಶಯಗಳನ್ನೆ ಹತ್ತಿಕ್ಕಲಾಗುತ್ತಿದ್ದು. ಯುವ ಶಕ್ತಿಯನ್ನು ಧರ್ಮದ ಅಮಲಿನಲ್ಲಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಸಂವಿಧಾನವನ್ನೆ ಬದಲಾಯಿಸಿ ವಿಭಜನಾ ಸಿದ್ಧಾಂತದ ಮನುವಾದವನ್ನು ಪ್ರತಿಷ್ಠಾಪಿಸುವ ಸಂಚು ನಡೆಯುತ್ತಿದೆ. ಸಂವಿಧಾನ ಉಳಿಯದೆ ದೇಶದ ಉಳಿವಿಲ್ಲ. ಸಂವಿಧಾನ ಮತೀಯಶಕ್ತಿಗಳ ಕೈಗೆ ಸಿಕ್ಕು ಗಂಡಾಂತರದಲ್ಲಿರುವಾಗ ಸಂವಿಧಾನದ ಉಳಿವಿಗಾಗಿ ಈ ದೇಶದ ಪ್ರತಿಯೊಬ್ಬರು ಜಾತಿ.ಧರ್ಮ ದ ಬೇಧವಿಲ್ಲದೆ ಹೋರಾಡಬೇಕಿದೆ ಎಂದರು.
ಶಿಕ್ಷಣ ಹುಲಿಯ ಹಾಲಿನಂತೆ. ಅದನ್ನು ಕುಡಿದವರು ಘರ್ಜಿಸುತ್ತಾರೆ ಎಂಬ ಅಂಬೇಡ್ಕರ್ ಅವರ ಮಾತಿನಂತೆ ದಲಿತರು.ದಮನಿತರು ಶಿಕ್ಷಣವಂತರಾಗಿ ಜ್ಞಾನವನ್ನು ಸಂಪಾದಿಸಬೇಕು. ಅಂಬೇಡ್ಕರ್ ಅವರನ್ನು ಕೇವಲ ಮನೆಯಲ್ಲಿ. ಬೀದಿಗಳಲ್ಲಿ ಪೋಟೋ, ಪ್ರತಿಮೆಗಳಾಗಿ ಹಾಕಿ ಕೊಂಡರೆ ಸಾಲದು. ಅಂಬೇಡ್ಕರ್ ಅವರ ವಿಚಾರಧಾರೆ, ಸ್ವಾಭಿಮಾನ, ಹೋರಾಟದ ಬದ್ದತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಎದೆಯೊಳಗಿಳಿಸಿಕೊಳ್ಳಬೇಕು. ಈ ಮೂಲಕ ಸಂವಿಧಾನ ವಿರೋಧಿ ಕೃತ್ಯಗಳ ವಿರುದ್ಧ ದನಿ ಎತ್ತಬೇಕು ಇದುವೆ ನಾವು ಅಂಬೇಡ್ಕರ್ ಅವರಿಗೆ ಕೊಡುವ ಮಹಾನ್ ಗೌರವವಾಗುತ್ತದೆ ಎಂದು ಪ್ರತಿಪಾದಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಜನಪರ ಹೋರಾಟಗಾರರಾದ ಸುರೇಶ್, ಶಿವಕುಮಾರ್, ಮಂಜುನಾಥ್, ಕರಕುಚ್ಚಿ ಅಂಬೇಡ್ಕರ್ ಸಂಘದ ರಮೇಶ್, ಪ್ರಶಾಂತ್, ಯಶ್ವಂತ, ನವೀನ್ ಮತ್ತಿತರರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post