ಭದ್ರಾವತಿ: ಉತ್ತರ ಪ್ರದೇಶದ ಆಗ್ರಾ ವಕೀಲರ ಪರಿಷತ್ ಅಧ್ಯಕ್ಷೆ ದರ್ವೆಶ್ ಯಾದವ್ ಅವರ ಹತ್ಯೆಯನ್ನು ಖಂಡಿಸಿ ನಗರದ ವಕೀಲರ ಸಂಘದ ಸದಸ್ಯರು ಶುಕ್ರವಾರ ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವೈ. ಜಯರಾಂ ಮಾತನಾಡಿ ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆ ಅಮಾನವೀಯ ಕೃತ್ಯವಾಗಿದ್ದು ಇಂಥಹ ಘಟನೆ ಮರುಕಳಿಸದಂತೆ ಅಲ್ಲಿನ ಸರಕಾರ ಶೀಘ್ರ ಕ್ರಮಕೈಗೊಳ್ಳಬೇಕು ಎಂದರು.
ವಕೀಲರಾದ ಬಿ.ಎಸ್. ರೂಪಾರಾವ್ ಮಾತನಾಡಿ ಮಾನವೀಯತೆ ಮರೆತು ಇಂತಹ ಘಟನೆ ನಡೆದಿರುವುದು ಖಂಡನಾರ್ಹ. ಅಲ್ಲದೆ ಇತ್ತೀಚಿಗೆ ಅರಸಿಕೆರೆಯಲ್ಲಿ ವಕೀಲರೋರ್ವರ ಮೇಲೆ ನಡೆದ ಕಹಿ ಘಟನೆಯಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ವಕೀಲರಿಗೆ ಜೀವ ಭದ್ರತೆ ಹಾಗು ರಕ್ಷಣೆ ಇಲ್ಲದಂತಾಗಿದೆ. ಆಯಾ ರಾಜ್ಯ ಸರಕಾರಿಗಳು ಸೂಕ್ತ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತಾಬೇಕೆಂದರು.
ಸಂಘದ ಕಾರ್ಯದರ್ಶಿ ಟಿ.ಎಸ್. ರಾಜು ಮನವಿ ವಾಚಿಸಿದರು. ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ತಹಶೀಲ್ದಾರ್’ಗೆ ಮನವಿ ಅರ್ಪಿಸಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿಗಳಾದ ಮೋಹನ್, ರಂಗಪ್ಪ, ಶ್ವೇತ, ಸುಜಾತ, ವಸಂತ, ರಮೇಶ್‍ಬಾಬು, ಮಹೇಶ್‍ಕುಮಾರ್, ಸಯ್ಯದ್ ನಿಯಾಜ್, ಕೂಡ್ಲಿಗೆರೆ ಮಂಜುನಾಥ್, ನವರತ್ನಮಾಲ, ಬೇಕಲ್ ವಿದ್ಯಾ, ಪ್ರಶಾಂತ್, ಬಿ.ಸಿ.ಕೇಶವಮೂರ್ತಿ, ರಮೇಶ್‍ಸಿಂಗ್, ಪರಮೇಶ್ವರಪ್ಪ, ಉಮೇಶ್, ನಾಗವೇಣಿ, ಮುಕ್ತಾಬಾಯಿ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post